ಅಥಣಿ: ಯೋಗ ಗುರು ಶ್ರೀ ವಚನಾನಂದ ಸ್ವಾಮೀಜಿ ಅವರ ಸಹೋದರ ಅಶೋಕ ಗೌರಗೊಂಡ ನಿನ್ನೆ ತಡರಾತ್ರಿ ಬೈಕ್ ಅಪಘಾತದಲ್ಲಿ ವಿಧಿವಶರಾಗಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತಾಂವಸಿ ಮೂಲದವರಾದ ಅಶೋಕ ಅವರು ನಿನ್ನೆ ತಡರಾತ್ರಿ ತಾಂವಶಿ ಗ್ರಾಮದಿಂದ ಅಥಣಿ ಕಡೆಗೆ ಸಾಗುವಾಗ ಅಥಣಿ ಸಮೀಪದ ಭರಮೋಕೋಡಿ ಹತ್ತಿರ ಈ ಅಪಘಾತ ಸಂಭವಿಸಿದೆ.
ಬೈಕ್ ಮೇಲೆ ಹೋಗುತ್ತಿದ್ದ ವೇಳೆ ನಾಯಿ ಅಡ್ಡ ಬಂದ ಪರಿಣಾಮ ಈ ಅಪಘಾತ ಸಂಭವಿಸಿದ್ದು . ಸ್ಥಳದಲ್ಲೆ ಮೃತ ಪಟ್ಟಿದ್ದಾರೆ. ಮೃತ ಅಶೋಕ ಅವರಿಗೆ ತಾಯಿ ಮಡದಿ ಮೂರು ಹೆಣ್ಣು ಮಕ್ಕಳಿದ್ದು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಶೋಕ್ ಗೌವರಗೊಂಡ ಅವರು ಸಾಮಾಜಿಕ ಕಳಕಳಿಯ ಮೂಲಕ ಎಲ್ಲರ ಮನ ಗೆದ್ದ ಅವರು ಲಕ್ಷಾಂತರ ಸಂಖ್ಯೆಯ ಅಭಿಮಾನಿ ಬಳಗ ಗಳಿಸಿದ್ದಾರೆ. ಮೃತ ಅಶೋಕ್ ಅವರ ಅಂತ್ಯಕ್ರಿಯ ಸ್ವಗ್ರಾಮವಾದ ತಾವಂಶಿ ಗ್ರಾಮದಲ್ಲಿ ನೆರವೇರಲಿದೆ.