ಅಪರಾಧ ವಿಭಾಗದಲ್ಲಿ ನಿಸಾರ್ಥ ಸೇವೆ ಸಲ್ಲಿಸುತ್ತಿರುವ ಹವಾಲ್ದಾರ್ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಶನಾ ಪತ್ರ ನೀಡಿ ಗೌರವಿಸಿದ್ದಾರೆ
ಬೆಳಗಾವಿ ಜಿಲ್ಲೆಯ ಖಾನಾಪೂರ ಪೋಲಿಸ್ ಠಾಣೆಯ ಹವಾಲ್ದಾರ್ ಜಗದೀಶ್ ಕಾದ್ರೋಳ್ಳಿಗೆ ಅವರಿಗೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ಪ್ರಶಂಶನಾ ಪತ್ರ ನೀಡಿ ಗೌರವಿಸಿದರು ಹವಾಲ್ದಾರ್ ಜಗದೀಶ್ ಕಾದ್ರೋಳ್ಳಿ ಅವರು ಅಪರಾಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದು ಇನ್ನೂ ಹೆಚ್ಚು ಆತ್ಮವಿಶ್ವಾಸದಿಂದ ಕರ್ತವ್ಯ ನಿರ್ವಹಣೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಭಿನಂದನೆಗಳನ್ನು ಸಲ್ಲಿಸಿ ಅವರಿಗೆ ಬೆಳಗಾವಿಯ ಎಸ್ ಪಿ ಕಚೇರಿಯಲ್ಲಿ ಪ್ರಶಂಶನಾ ಪತ್ರ ನೀಡಿ ಗೌರವಿಸಿದರು.