ತಪ್ಪು ಮಾಹಿತಿ ನೀಡಿ ತಿನಸು ಕಟ್ಟೆಯಲ್ಲಿ ಮಳಿಗೆ ಪಡೆದುಕೊಂಡು ಕಾಯ್ದೆ ಪ್ರಕಾರ ಅನರ್ಹಗೊಂಡಿರುವ ಮೇಯರ ಮಂಗೇಶ ಪವಾರ ಹಾಗೂ ನಗರ ಸೇವಕ ಜಯಂತ ಜಾಧವ ಅವರು ತಕ್ಷಣ ರಾಜೀನಾಮೆ ನೀಡಬೇಕೆಂದು ಸಾಮಾಜಿಕ ಹೋರಾಟಗಾರರ ರಾಜು ಟೋಪಣ್ಣವರ ಸುಜೀತ್ ಮುಳಗುಂದ ಹಾಗೂ ನಿತಿನ್ ಬೋಲಬಂಡಿ ಆಗ್ರಹಿಸಿದ್ದಾರೆ.
ಶನಿವಾರ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿ, ಮೇಯರ್ ಮಂಗೇಶ ಪವಾರ ಹಾಗೂ ನಗರ ಸೇವಕ ಜಯಂತ ಜಾಧವ ಬಗ್ಗೆ ಆರ್.ಟಿ.ಐ ನಿಂದ ಮಾಹಿತಿ ಪಡೆದುಕೊಂಡಿದ್ದೇವೆ. ತಪ್ಪು ಮಾಹಿತಿ ನೀಡಿದ್ದಾರೆ ಅವರನ್ನು ಅನರ್ಹಗೊಳಿಸಲಾಗಿದೆ ತಕ್ಷಣ ರಾಜೀನಾಮೆ ನೀಡಬೇಕು. ಸರ್ಕಾರ ನೀರ್ಲಕ್ಷ ಮಾಡುತ್ತಿದೆ. ಬೀದಿಗಿಳಿದು ಹಾಗೂ ಕಾನೂನಾತ್ಮಕ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ರಾಜು ಟೋಪಣ್ಣವರ ಮಾತನಾಡಿ ನಗರಸೇವಕರು ತಮ್ಮ ಸಂಗಾತಿಯ ಹೆಸರಿನಲ್ಲಿ ಹೊಂದಿರುವ ವಾಣಿಜ್ಯ ಆಸ್ತಿಗಳು ಮತ್ತು ಆದಾಯವನ್ನು, ವಿಶೇಷವಾಗಿ ತಿನಸು ಕಟ್ಟೆಯಲ್ಲಿರುವ ಅಂಗಡಿಗಳನ್ನು ಉದ್ದೇಶಪೂರ್ವಕವಾಗಿ ನಿಗ್ರಹಿಸಿದ್ದಾರೆ ಎಂದು ಬೆಳಕಿಗೆ ಬಂದಿದೆ. ಮತ್ತು ಹಲವಾರು ನಗರಸೇವಕರು ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಸಲ್ಲಿಸಿಲ್ಲ ತಪ್ಪಾದ ಅಥವಾ ಸುಳ್ಳು ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಸಲ್ಲಿಸಿದ್ದಾರೆ. ಇದು ಕಾನೂನಿನ ಅಡಿಯಲ್ಲಿ ಸುಳ್ಳು ಘೋಷಣೆಯಾಗಿದೆ. ಎಲ್ಲ ನಗರ ಸೇವಕರ ಮಾಹಿತಿಗಾಗಿ ಆರ್.ಟಿ.ಐ ಅರ್ಜಿ ಸಲ್ಲಿಸಿದ್ದೇನೆ. ಮಾಹಿತಿ ಇನ್ನೂ ನೀಡಿಲ್ಲ ಮಹಾನಗರ ಪಾಲಿಕೆಯ ಅಧಿಕಾರಿಗಳು ಅಧಿಕಾರದಲ್ಲಿರುವ ನಗರಸೇವಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿದೆ ಎಂದರು.
ಸುಜೀತ್ ಮುಳಗುಂದ ಮಾತನಾಡಿ, ಬೆಳಗಾವಿ ಮಹಾನಗರ ಪಾಲಿಕೆಯ ಕೆಲವು ನಗರಸೇವಕರು ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ಸ್ ಕಾಯ್ದೆ, 1976 ರ ಸೆಕ್ಷನ್ 19 ರ ಉಲ್ಲಂಘನೆಯಾಗಿವೆ. ಕಾಯ್ದೆ ಉಲ್ಲಂಘಿಸಿ ಅನರ್ಹಗೊಂಡಿರುವ ನಗರಸೇವಕರು ಜವಾಬ್ದಾರಿಯಿಂದ ರಾಜೀನಾಮೆ ನೀಡಬೇಕೆಂದರು.
ಹೈಕೋರ್ಟ್ ನ್ಯಾಯವಾದಿ ನಿತಿನ್ ಬೋಲಬಂಡಿ ಅನರ್ಹಗೊಂಡಿರುವ ನಗರ ಸೇವಕರು ಯಾವ ಅರ್ಹತೆ ಮೇಲೆ ಅಧಿಕೃತವಾಗಿ ಕಚೇರಿಗೆ ತೆರಳಿ ಅಧಿಕಾರ ಚಲ್ಲಾಯಿಸುತ್ತಿರಿ ಕರ್ನಾಟಕ ಮುನ್ಸಿಪಲ್ ಕಾಯ್ದೆ ಪ್ರಕಾರ ಮತ ಚಲಾಯಿಸಲ್ಲಿಕ್ಕೂ ಸಾಧ್ಯವಿಲ್ಲ ಇದೊಂದು ಅಪರಾಧವಾಗುತ್ತದೆ ಎಂದರು.