Hukkeri

ಹುಕ್ಕೇರಿ ಕೋರ್ಟ ಸರ್ಕಲ್ ಸುತ್ತುವರೆದು ರಸ್ತೆ ಬಂದ್ ಮಾಡಿದ ಕುರಿಗಳು

Share

ಹುಕ್ಕೇರಿ ನಗರದ ಕೋರ್ಟ ಸರ್ಕಲ್ ಬಳಿ ಸಾವಿರಾರು ಕುರಿಗಳು ರಸ್ತೆ ಬಂದ್ ಮಾಡಿ ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿದ ಘಟನೆ ಜರುಗಿತು.
ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದ ಸರ್ವೆ ನಂಬರ 401 ರಲ್ಲಿ 23 ಗುಂಟೆ ಗಾಯರಾಣ ಜಮಿನಿನಲ್ಲಿ ಪುರಾತಣ ಲಕ್ಷ್ಮಿ ದೇವಿ ಮಂದಿರ ಹತ್ತಿರ ಇರುವ ಖುಲ್ಲಾ ಜಾಗೆಯಲ್ಲಿ ತಾಲೂಕಿನ ಗುಡಸ, ಬೆಲ್ಲದ ಬಾಗೆವಾಡಿ, ಸಾರಾಪೂರ, ಕೊಟಬಾಗಿ, ಕಡಹಟ್ಟಿ ಮತ್ತು ರಕ್ಷಿ ಗ್ರಾಮಗಳ ಕುರಿಗಾಯಿಗಳು ಕುರಿ ಮತ್ತು ದನ ಕರುಗಳನ್ನು ಮೇಯಿಸಲು ಮಿಸಲಿಟ್ಟ ಜಮಿನನ್ನು ಇತ್ತಿಚಿಗೆ ಸರ್ಕಾರ ಬೇರೆಯವರಿಗೆ ಹಸ್ತಾಂತರ ಮಾಡುವದು ಕಂಡು ಬಂದ ಹಿನ್ನಲೆಯಲ್ಲಿ ಇಂದು ಹಾಲಮತ ಸಮಾಜದ ಮುಖಂಡರು ,ಕುರುಗಾಯಿಗಳು ಕುಟುಂಬ ಸಮೇತ ಕುರಿಗಳನ್ನು ರಸ್ತೆ ಮೇಲೆ ನಿಲ್ಲಿಸಿ ಪ್ರತಿಭಟನೆ ಮಾಡಿದರು.

ಮಾದ್ಯಮಗಳೊಂದಿಗೆ ಮಾತನಾಡಿದ ಕುರಿಗಾಯಿ ಗುಡಸ ಗ್ರಾಮದ ಗಾಯರಾಣ ಜಮಿನಿನಲ್ಲಿ ನಮ್ಮ ಪೂರ್ವಜರಿಂದ ಕುರಿ ಮತ್ತು ದನ ಕರುಗಳನ್ನು ಮೇಯಿಸಿ ಜೀವನ ಸಾಗಿಸುತ್ತಿದ್ದೆವೆ ಆದರೆ ಇತ್ತಿಚಿಗೆ ಈ ಜಮಿನನ್ನು ಅತಿಕ್ರಮಣ ಮಾಡುತ್ತಿರುವವರಿಗೆ ಹಸ್ತಾಂತರ ಮಾಡುವದಾಗಿ ಮತ್ತು ಬೇರೆಯವರಿಗೆ ಪರಭಾರೆ ಮಾಡುವದು ತಿಳಿದು ಬಂದಿದೆ , ಈ ಕುರಿತು ಈಗಾಗಲೇ ಸಂಭಂದಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವದೇ ಪ್ರಯೋಜನ ವಾಗಿಲ್ಲಾ ಕಾರಣ ಈಗ ನಮ್ಮ ಜಾನುವಾರಗಳ ಸಮೇತ ಕುಟುಂಬಸ್ಥರ ಜೋತೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದೆವೆ, ಸರ್ಕಾರ ನಮ್ಮ ಮನವಿಗೆ ಸ್ಪಂದಿಸ ಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಗ್ರೇಡ್ ೨ ತಹಸಿಲ್ದಾರ ಪ್ರಕಾಶ ಕಲ್ಲೋಳಿ ಯವರಿಗೆ ಪ್ರತಿಭಟನೆ ಕಾರರು ತರಾಟೆಗೆ ತಗೆದುಕೊಂಡು ಸ್ಥಳಕ್ಕೆ ತಹಸಿಲ್ದಾರರೆ ಬರಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕಾ ಹಾಲ ಮತ ಸಮಾಜದ ಮುಖಂಡರು, ಕುರಿಗಾಯಿಗಳು ತಮ್ಮ ಜಾನುವಾರಗಳ ಸಮೇತ ರಸ್ತೆ ಬಂದ್ ಮಾಡಿದ್ದರಿಂದ ಕೇಲ ಕಾಲ ವಾಹನ ಸವಾರರು ಪರದಾಡಬೇಕಾಯಿತು.

ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!