ಕಾಗವಾಡ: ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕಾಗಿ ಸರ್ಕಾರ ಮಾಡುವ ಎಲ್ಲ ಕೆಲಸಗಳು ಸಂಘ-ಸ0ಸ್ಥೆಗಳು, ಮಠ-ಮಾನ್ಯಗಳು ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಸೇವೆ ನೀಡುತ್ತಿದ್ದಾರೆ. ಸಿದ್ಧಗಂಗಾ ಶ್ರೀಗಳ ಮಠ 10 ಸಾವಿರ ವಿದ್ಯಾರ್ಥಿಗಳಿಗೆ ದಾಸೋಹದ ಜೊತೆಗೆ ಜ್ಞಾನಾರ್ಜನೆ ಮಾಡುತ್ತಿದೆ. ಇದೇ ರೀತಿ ಇನ್ನೂಳಿದ ಶಿಕ್ಷಣ ಸಂಸ್ಥೆಗಳು ಮುಂದೆ ಬಂದಿದ್ದರಿAದ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ಕ್ಷೇತ್ರದಲ್ಲಿ ಒಂದು ಹೆಜ್ಜೆ ಮುಂದೆಯೆದೆ, ಎಂದು ಕಾಗವಾಡ ಶಾಸಕರು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ರಾಜು ಕಾಗೆ ಹೇಳಿದ್ದಾರೆ.
ಅವರು ಶುಕ್ರವಾರ ದಿ. 11 ರಂದು ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಪುಸ್ತಕಗಳ ಬಗ್ಗೆ ಭೋಧನೆ ಮಾಡದೇ 25 ಕಂಪ್ಯೂಟರ್‌ಗಳ ಕೇಂದ್ರ ಪ್ರಾರಂಭಿಸಿ, ಕಂಪ್ಯೂಟರ್ ಜ್ಞಾನ ನೀಡುವ ವ್ಯವಸ್ಥೆ ಕೈಗೊಂಡಿದ್ದಾರೆ. ಇದರ ಉದ್ಘಾಟನೆಯನ್ನು ಶಾಸಕರು ನೆರವೇರಿಸಿದರು.
ಶಿಕ್ಷಣ ಪ್ರೇಮಿ ಹಾಗೂ ರಾಯಬಾಗದ ಖ್ಯಾತ ಉದ್ಯಮಿಗಳಾದ ಕೈಲಾಶ ಪುರಮವಾರ ಬಂಧುಗಳು 550 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬ್ಯಾಗ ನೀಡಿದರು. ಇದರ ಹಂಚಿಕೆ ನೆರವೇರಿತು. ಅಲ್ಲದೇ ಉದ್ಯಮಿ ಶಾಂತಿನಾಥ ಪಾಲಗೌಡರ, ಮಹಾವೀರ ಪಾಲಗೌಡರ, ಕೈಲಾಶ ಪರಮವಾರ ಇವರು ಶಿಕ್ಷಣ ಸಂಸ್ಥೆಯ ಕಟ್ಟಡಕ್ಕಾಗಿ ಸುಮಾರು 10 ಲಕ್ಷ ರೂ. ದಾನವಾಗಿ ನೀಡಿದ್ದು, ಜೊತೆಗೆ ಶಾಸಕ ರಾಜು ಕಾಗೆ ಇವರು ತಮ್ಮ ದಿವಂಗತ ಪುತ್ರಿ ಕೃತಿಕಾ ಪಾಟೀಲ ಇವರ ಸ್ಮರಣಾರ್ಥ 2 ಲಕ್ಷ ರೂ. ಗಳ ದಾನ ನೀಡಿದ್ದು, ಇವರನ್ನೆಲ್ಲರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಸಮಾರಂಭದಲ್ಲಿ ಕೀರ್ತಿ ಸಮೀರ ಪುರಮವಾರ, ಸಂಗೀತಾ ಮಹಾವೀರ ಪಾಲಗೌಡರ, ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ಅಧ್ಯಕ್ಷ ವಿನೋದ ಬರಗಾಲೆ, ಉಪಾಧ್ಯಕ್ಷ ಅಜೀತ ನಾಂದ್ರೆ ಸದಸ್ಯರಾದ ಡಾ. ಅಶೋಕ ಪಾಟೀಲ, ಆರ್.ವ್ಹಿ. ಸಂಗೋರಾಮ, ರಾಹುಲ ಸವದಿ, ರಾಜು ಘೇನಪ್ಪಗೋಳ, ಯಶವಂತ ಚಾವರೆ, ಎಂ.ಎಸ್. ಪಾಟೀಲ, ಅಣ್ಣಾಸಾಹೇಬ ಹಂಡಗೆ, ಅಕ್ಕಾತಾಯಿ ಮುಜಾವರ, ಸುನೀತಾ ಮಾಕನ್ನವರ, ಮುಖ್ಯಾದ್ಯಾಪಕರಾದ ಎಂ.ಎಸ್. ಕಾಳೇನಟ್ಟಿ, ಬಾಹುಬಲಿ ಬನಜವಾಡ, ಎಂ.ಕೆ. ಕಾಂಬಳೆ, ಎ.ಕೆ. ಪಾಟೀಲ, ಸತೀಶ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸುಕುಮಾರ್ ಬನ್ನೂರೆ
ಔನ ನ್ಯೂಸ್ ಕಾಗವಾಡ