Uncategorized

ಜೋಗದ ಸಿರಿಯ ನೋಡುವಾ ಬಾರಾ…

Share

ಧಾರಾಕಾರ ಮಳೆಯ ಹಿನ್ನೆಲೆ ಹರಿದ್ವರ್ಣಗಳಲ್ಲಿ ಹಾಲಿನ ನೊರೆಯಂತೆ ಧುಮ್ಮುಕ್ಕಿರುವ ಜೋಗ ಜಲಪಾತದ ರುದ್ರರಮಣೀಯ ದೃಶ್ಯ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ. ಜೋಗ್ ಫಾಲ್ಸಿನ ಸೌಂದರ್ಯ ನಿತ್ಯೋತ್ಸವ ಕವಿಯ ಜೋಗದ ಸಿರಿ ಬೆಳಕಿನಲ್ಲಿ ಗೀತೆಯನ್ನು ನೆನಪಿಸುತ್ತಿದೆ.

ಕರ್ನಾಟಕದಲ್ಲಿ ಕಣ್ಮನ ಸೆಳೆಯುವ ಅನೇಕ ಸುಂದರ ಜಲಪಾತಗಳಿವೆ. ಅವುಗಳು ಮಾನ್ಸೂನ್‌ ಸಮಯದಲ್ಲಿ ಮೈದುಂಬಿ ಹರಿಯುವ ಮೂಲಕ ಜಲಪಾತದ ಪ್ರೇಮಿಗಳನ್ನು ಆಹ್ವಾನಿಸುತ್ತದೆ. ಜಲಪಾತದ ಸುತ್ತಲೂ ಇರುವ ಹಚ್ಚ ಹಸಿರಿನ ಸೌಂದರ್ಯ, ಚುಮು ಚುಮು ಚಳಿ, ಹಾಲಿನ ನೊರೆಯಂತೆ ಧುಮ್ಮಿಕ್ಕುವ ಜಲಧಾರೆಗಳು ನಿಜಕ್ಕೂ ಮಂತ್ರಮುಗ್ಧಗೊಳಿಸುತ್ತದೆ. ಜೋಗ್ ಫಾಲ್ಸ್ ಕರ್ನಾಟಕದ ಅತ್ಯಂತ ಪ್ರಖ್ಯಾತ ಜಲಪಾತಗಳಲ್ಲಿ ಒಂದಾಗಿದೆ. ಇದು ಶಿವಮೊಗ್ಗ ಪ್ರವಾಸೋದ್ಯಮದಲ್ಲಿ ಮೊದಲ ಸ್ಥಾನದಲ್ಲಿದೆ. ಈ ನಗರವು ಹಚ್ಚ ಹಸಿರಿನ ಭೂದೃಶ್ಯಗಳು, ತೆಂಗಿನಕಾಯಿ ಮರಗಳು ಮತ್ತು ಹೇರಳವಾದ ಜಲಪಾತಗಳಿಂದ ಆವೃತವಾಗಿದೆ. ಈ ಜಲಪಾತದ ವೀಕ್ಷಣೆಯು ಮಾನ್ಸುನ್‌ ಸಮಯದಲ್ಲಿ ರಮಣೀಯವಾದ ನೋಟವನ್ನು ನೀಡುತ್ತದೆ. ಈ ಜಲಪಾತವು ರಾಜ, ರಾಣಿ, ರೋರರ್ ಮತ್ತು ರಾಕೆಟ್‌ ಎಂಬ ಚರ್ತುಮುಖಗಳನ್ನು ಹೊಂದಿದೆ.

Tags:

error: Content is protected !!