ಬಾಗಲಕೋಟೆ ಜಿಲ್ಲೆ ಮುದ್ದಾಪುರ ಗ್ರಾಮದ ಹತ್ತಿರ ಬೆಳಗಾವಿ -ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಡಿವೈಡರನ್ನು ಖಾಸಗಿ ವ್ಯಕ್ತಿ ದ್ವಂಸ ಮಾಡಿದ್ದರಿಂದ ಪ್ರತಿಭಟನೆ ನಡೆಸಲಾಯಿತು
ತಿಮ್ಮಾಪುರ ಗ್ರಾಮದ ಕೃಷ್ಣ ಪರಡ್ಡಿ ಎಂಬುವವರಿಂದ ಡಿವೈಡರ್ ದ್ವಂಸ ಮಾಡಲಾಗಿತ್ತು ಸ್ಥಳೀಯರ ವಿರೋಧ ಹಿನ್ನೆಲೆ ಯಲ್ಲಿ ಧ್ವಂಸ ಕಾರ್ಯವನ್ನು ಕೃಷ್ಣ ಪರೆಡ್ಡಿ ಅರ್ಧಕ್ಕೆ ನಿಲ್ಲಿಸಿದ್ದಾನೆ. ರಸಗೊಬ್ಬರ ವ್ಯಾಪಾರಕ್ಕೆ ಅನುಕೂಲ ಮಾಡಿಕೊಳ್ಳಲು ವ್ಯಕ್ತಿ ಮುಂದಾಗಿ ರಸ್ತೆ ಡಿವೈಡರ್ ಒಡೆದು ತಮ್ಮ ಅಂಗಡಿಗೆ ವಾಹನ ಬರಲು ಅನುವು ಮಾಡಿಕೊಳ್ಳಲು ಯತ್ನಿಸಿದ್ದಾನೆ ಸಾರ್ವಜನಿಕ ಆಸ್ತಿಯನ್ನು ಹೇಗೆ ದ್ವಂಸ ಮಾಡ್ತಾರೆ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ ಲಕ್ಷಾಂತರ ರೂ ಕರ್ಚು ಮಾಡಿ ನಿರ್ಮಿಸಿರುವ ರಸ್ತೆ ವಿಭಜಕವದು. ಸಾರ್ವಜನಿಕರ ತೆರಿಗೆ ದುಡ್ಡು ಪೋಲಾಗಿದ್ದು ದಂಡ ಸಮೇತ ವಸೂಲಿಗೆ ಆಗ್ರಹಿಸಲಾಗಿದೆ
ಬೆಳಗಾವಿ- ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ ಎಲ್ಲ ಗೊತ್ತಿದ್ರೂ ಸುಮ್ಮನೆ ಕುಳಿತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ ಅನುಮತಿ ಪಡೆದು ದ್ವಂಸ ಮಾಡೋಕೆ ಮುಂದಾಗಿದ್ದಾರೆಂದು ಅಧಿಕಾರಿಗಳು ಸಬೂಬು ನೀಡಿದ್ದರಿಂದ ಅಧಿಕಾರಿಗಳ ವರ್ತನೆಗೆ ಗ್ರಾಮಸ್ಥರು ಕಿಡಿಕಾರಿದ್ದಾರೆ
ಈ ಸಂದರ್ಭದಲ್ಲಿ ರಸ್ತೆಗೆ ಅಡ್ಡಲಾಗಿ ಗ್ರಾಮಸ್ಥರು ಕುಳಿತುಕೊಂಡು ಪ್ರತಿಭಟನೆ ನಡೆಸಿದರು