ಲೋಕೋಪಯೋಗಿ ಇಲಾಖೆಯ ಕಾಗವಾಡ ಹಾಗೂ ಅಥಣಿ ತಾಲೂಕಿನ ಸೇವಾ ನಿವೃತ ಕಾರ್ಯನಿರ್ವಾಹಕ ಅಭಿಯಂತರಾದ ಜಯಾನಂದ ಹಿರೇಮಠ್ ಇವರನ್ನು ಅವರ ಹುಟ್ಟೂರ ಲೋಕುರ ಗ್ರಾಮದಲ್ಲಿ ಸಾರ್ವಜನಿಕರು ಸನ್ಮಾನಿಸಿ ಅಭಿನಂದಿಸಿದರು.
ರವಿವಾರ ರಂದು ಲೋಕುರ ಗ್ರಾಮದ ಶ್ರೀಲೋಕನಾಥ ಮಠದಲ್ಲಿ ಸನ್ಮಾನಿಸುವ ಸಮಾರಂಭ ಜರುಗಿತು.
ಲೋಕುರ ಗ್ರಾಮದ ಲೋಕನಾಥ್ ಪಿಕೆಪಿಎಸ್ ಸಂಸ್ಥೆಯ ಅಧ್ಯಕ್ಷ ತಾತ್ಯಾಸಾಹೇಬ್ ಗಡಗೆ, ಲೋಕುರ ಪರಿಸರ ಸೊಸೈಟಿ ಅಧ್ಯಕ್ಷ ನ್ಯಾಯವಾದಿ ಎಸ.ಎಸ.ಗಡಿಗೆ, ಗ್ರಾಮ ಪಂಚಾಯಿತಿ ಸದಸ್ಯ ಧರ್ಮರಾಜ ಗಡಿಗೆ, ಡಾಕ್ಟರ ರವಿ ಹಿರೇಮಠ, ಅಜಿತ ಖೋತ, ಪ್ರದೀಪ ಖೂಚನೆ, ವೀರೇಶ ಹಿರೇಮಠ, ಇವರು ಅಧಿಕಾರಿ ಜಯಾನಂದ್ ಹಿರೇಮಠ್ ಇವರ ಬಗ್ಗೆ ತಮ್ಮ ಅನಿಸಿಕೆಗಳು ಹೇಳುತ್ತಾ ಒಳ್ಳೆಯ ಪ್ರಾಮಾಣಿಕ ಅಧಿಕಾರಿ, ೪೦ ವರ್ಷಗಳಲ್ಲಿ ಯಾವುದೇ ಕಪ್ಪು ಚುಕ್ಕಿ ಇವರನ್ನು ಸ್ಪರ್ಶು ಮಾಡಿಲ್ಲ ಅವರು ಇಗ ನಿವೃತಗೊಳುತ್ತಿದಾರೆ ಎಂದು ಹೇಳಿ ಅವರ ಪತ್ನಿ ಅನಿತಾ ಹಿರೇಮಠ, ಜಯಾನಂದ್ ಹಿರೇಮಠ ಇವರನ್ನು ಸನ್ಮಾನಿಸಿ ಅಭಿನಂದಿಸಿದರು.
ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತಾಧಿಕಾರಿ ಜಯಾನಂದ ಹಿರೇಮಠ್ ಇವರು ಮಾತನಾಡುವಾಗ, ಲೋಕುರ ಚಿಕ್ಕ ಗ್ರಾಮ, ನನ್ನ ಹುಟ್ಟೂರು ಇಲ್ಲಿಗೆ ನನ್ನ ಕುಟುಂಬದವರು ಆಪ್ತರು, ವಿದ್ಯಾಭ್ಯಾಸ ಮಾಡುವಾಗ ವಿಶೇಷ ಸಹಕಾರ ನೀಡಿದರು ಬಳಿಕ ೪೦ ವರ್ಷ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳು, ಸಹಕರಿಸಿದರಿಂದ ಇಲಾಖೆಯಲ್ಲಿ ಆದರ್ಶ ಅಧಿಕಾರಿಯಂದು ಸೇವೆ ಸಲ್ಲಿಸಲು ಅನುಕೂಲವಾಯಿತು. ನಿವೃತ್ತಿ ಜೀವನ ನನ್ನಿಂದ ಇನ್ನಷ್ಟು ಸಾಮಾನ್ಯರ ಸೇವೆ ಮಾಡಿ ಜೀವನ ಕಳೆಯುವುದಾಗಿ ಹೇಳಿದರು.
Kagawad
ನಿವೃತ್ತ ಲೋಕೋಪಯೋಗಿ ಇಲಾಖೆ ಅಭಿಯಂತರ ದಯಾನಂದ ಹಿರೇಮಠರಿಗೆ ಹುಟ್ಟೂರಿನಲ್ಲಿ ಸನ್ಮಾನ
