ಖಾನಾಪೂರದ ಶ್ರೀ ಸಂತ ಜ್ಞಾನೇಶ್ವರ ಮಂದಿರದಲ್ಲಿ ಜರುಗಿದ ಹಿರಿಯ ನಾಗರಿಕರ ಮತ್ತು ನಿವೃತ್ತ ಸರಕಾರಿ ನೌಕರರ ಸಭೆಯಲ್ಲಿ ತೀರ್ಮಾನಿಸಿದಂತೆ ಸೋಮವಾರ ದಿ 21ರಂದು ಮುಂಜಾನೆ 11ಗಂಟೆಗೆ ತಹಶೀಲ್ದಾರ್ ಖಾನಾಪೂರ ಮೂಲಕ ಸನ್ಮಾನ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಕೆ ಮಾಡುವ ಮೂಲಕ ನಿವೃತ್ತ ಸರಕಾರಿ ನೌಕರರ ಸಮಸ್ಯೆಗಳ ಬಗ್ಗೆ ಹರಿಸಲು ಬೇಡಿಕೆಗಳನ್ನು ಮಾಡಲು ಖಾನಾಪೂರ ತಾಲೂಕಿನ ಎಲ್ಲಾ ಇಲಾಖೆಯ ಸರ್ಕಾರಿ ನಿವೃತ್ತ ನೌಕರ ಬಂಧುಗಳು ಉಪಸ್ಥಿತ ಇರಬೇಕೆಂದು ಖಾನಾಪೂರ ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಕುಂದರಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.