Chikkodi

ಮಜಲಟ್ಟಿ ಗುರುಪೂರ್ಣಿಮೆ ನಿಮಿತ್ಯ ಧಾರ್ಮಿಕ ಕಾರ್ಯಕ್ರಮ

Share

ಅಂಧಕಾರದ ಅಜ್ಞಾನದ ಕತ್ತಲೆಯನ್ನು ಜ್ಞಾನ ಉಪದೇಶದಿಂದ ದೂರ ಮಾಡುವನು ಸದ್ಗುರು ಮಾರ್ಗದಲ್ಲಿದ್ದರೆ ಸದ್ಗತಿ ಪ್ರಾಪ್ತಿಯಾಗಿ ಪರಮಾನಂದ ಸಿಗುತ್ತದೆ ನಿವೃತ್ತ ಪ್ರಾಂಶುಪಾಲ ಸತೀಶ ಕುಮಾರ್ ಗವತಿ ಹೇಳಿದರು

ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಗ್ರಾಮದ ಸದ್ಗುರು ಶ್ರೀ ಕಲ್ಮೇಶ್ವರ ಅಲ್ಲಮಪ್ರಭು ಮಂದಿರದಲ್ಲಿ ಕಳೆದ ಶನಿವಾರ ಜರುಗಿದ ಗುರು ಪೂರ್ಣಿಮೆ ಕಾರ್ಯಕ್ರಮ ಭಾಗವಹಿಸಿ ಅವರು ಮಾತನಾಡಿ ಸದ್ಗುರು ಮಾರ್ಗದಲ್ಲಿದ್ದರೆ ಸದ್ಗತಿ ಪ್ರಾಪ್ತಿಯಾಗುತ್ತೆ ಅಂತ ಸದ್ಗುರು ಎಲ್ಲದಕ್ಕಿಂತ ದೊಡ್ಡವರು, ಎಂದು ಸದ್ಗುರುವಿನ ಗುಣಗಾನ ಮಾಡಿದರು,

ನ್ಯಾಯವಾದಿ ಲಗಮಣ್ಣ ತೋರಣಹಳ್ಳಿ ಇವರು ಮಾತನಾಡಿ ಗುರುವಿನ ಶಿಷ್ಯರ ಸಂಬಂಧ ಹಾಲು ಜೇನಿನಂತಿದ್ದರೆ ಮೋಕ್ಷದ ದಾರಿಗೆ ಮಾರ್ಗವಾಗುತ್ತದೆ ಅಂತಹ ಗುರುಪೂರ್ಣಿಮೆ ಪುಣ್ಯಮೇಯ ಕಾರ್ಯಕ್ರಮ ಶಿಷ್ಯರಿಗೆ ಹಬ್ಬವಿದ್ದಂತೆ, ಗುರು ಪರಂಪರೆ ಮುನ್ನಡೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶಿಷ್ಯರು ಕೈ ಜೋಡಿಸಬೇಕೆಂದರು,
ಮಾತೋಶ್ರೀ ಸಾವಿತ್ರಮ್ಮ ಬಿ ಪಾಟೀಲ ಅವರು ಸದ್ಗುರು ಬಸವ ಪ್ರಭು ಮಹಾರಾಜರ ಭಾವಚಿತ್ರಕ್ಕೆ ಮಾಲಾರ್ಪಣೆ ಅರ್ಪಿಸಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ವಿವಿಧ ಗ್ರಾಮದ ಭಕ್ತ ಶಿಷ್ಯ ವೃಂದದವರು ಭಾಗವಹಿಸಿ ಭಜನಾ ಸೇವೆ ನಡೆಸಿಕೊಟ್ಟರು ಕುಮಾರಿ ಸುಜಾತ ಕುಮಾರಿ ಸುಪ್ರಿಯ ಗುರು ಭಕ್ತಿ ಗೀತ ಗಾಯನ ಪ್ರಸ್ತುತ ಪಡಿಸಿದರು ಬಸವರಾಜ ಹಲಗೆಕರ ಸಂತ್ರಾಮ ಮಯೂರ ಪರಶುರಾಮ್ ಕುರಣೆ ವಾದ್ಯ ಸಹಕಾರ ನೀಡಿದರು ಕಾರ್ಯಕ್ರಮದಲ್ಲಿ ಶರತ ಪಾಟೀಲ ಭರತ ಪಾಟೀಲ ವಿಜಯ ವಾಗಮಾರೆ ಮಲಗೌಡ ಚಿಮಣೆ ಹಿರಿಯ ಕಲಾವಿದ ಬಸವಪ್ರಭು ಕುಂಡ್ರಕ ಭಾಗವಹಿಸಿದ್ದರು ಪ್ರಾಸ್ತಾವಿಕವಾಗಿ ಭರತ ಕಲಾಚಂದ್ರ ಮಾತನಾಡಿ ವಂದಿಸಿದರು

Tags:

error: Content is protected !!