Belagavi

ಕಡಿಮೆ ದಾಖಲಾತಿ ಪಡೆದು ಇ-ಆಸ್ತಿ ನೊಂದಾಯಿಸಿಕೊಳ್ಳಿ

Share

ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಸಂಬಂಧವಿರದ ದಾಖಲಾತಿಗಳ ಬೇಡಿಕೆಗಳನ್ನ ಇಡದೇ, ಕಡಿಮೆ ದಾಖಲಾತಿಗಳನ್ನು ಪಡೆದು ಇ-ಆಸ್ತಿ ನೋಂದಣಿ ಮಾಡಿಕೊಳ್ಳಬೇಕೆಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ವಿಜಯ್ ಪಾಟೀಲ್ ಹೇಳಿದರು.

ಬೆಳಗಾವಿ ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಇ-ಆಸ್ತಿ ಮಹತ್ವದ ಪ್ರಕ್ರಿಯೆಯಾಗಿದೆ. ಬೆಂಗಳೂರಿನಲ್ಲಿ ಕೇವಲ 4 ದಾಖಲೆಗಳನ್ನು ಕೇಳುತ್ತಿರುವಾಗ ಬೆಳಗಾವಿಯಲ್ಲಿ ಹತ್ತಾರು ದಾಖಲೆಗಳನ್ನು ಕೇಳುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರಿಗೆ ಕಿರಿಕಿರಿಯಾಗುತ್ತಿದೆ. ಸಿಟಿಎಸ್ ಇದ್ದವರಿಗೆ ಇ-ಆಸ್ತಿ ನೀಡಬೇಕು. ನೂರಾರು ವರ್ಷಗಳ ಕಾಲ ಹಳೆಯದಾದ ಸಾಲ ಬಾಧ್ಯತಾ ಪ್ರಮಾಣಪತ್ರ ನೀಡುವುದು ಕಷ್ಟಕರ. ಸಾಲ ಬಾಧ್ಯತಾ ಪ್ರಮಾಣಪತ್ರಕ್ಕೂ ಮತ್ತು ಇ- ಆಸ್ತಿಗೆ ಯಾವುದೇ ಸಂಬಂಧವಿಲ್ಲ ಎಂದರು.

ಇನ್ನು ಬಿ-ಖಾತಾ ನೋಂದಣಿ ಕುರಿತು ಮೊದಲೂ ಜನರಿಗೆ ಸ್ಪಷ್ಟತೆಯನ್ನು ನೀಡಬೇಕು. ಜಿಲ್ಲಾಧಿಕಾರಿಗಳು ಮತ್ತು ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರು ಈ ಕುರಿತು ಮಾಧ್ಯಮಗೋಷ್ಟಿಯನ್ನು ನಡೆಸಿ ಮಾಹಿತಿಯನ್ನು ನೀಡಬೇಕು. ಎರಡುವರೆ ಲಕ್ಷ ಆಸ್ತಿಗಳಿರುವುದಾಗಿ ಮಹಾನಗರ ಪಾಲಿಕೆಯೇ ಮಾಹಿತಿ ನೀಡುತ್ತಿರುವಾಗ, ದಾಖಲಾತಿಗಳನ್ನು ಕಡಿಮೆ ಪಡೆದು, ಇ- ಆಸ್ತಿಯ ನೋಂದಣಿ ಹೆಚ್ಚಾಗಬೇಕು. ಸಿ.ಟಿ.ಎಸ್. ಆಧಾರದ ಮೇಲೆ ಮನೆ ಮನೆಗೆ ತೆರಳಿ ಇ-ಆಸ್ತಿಯನ್ನು ನೋಂದಾಯಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯದರ್ಶಿಗಳಾದ ಪವನ್ ಕುಮಾರ್ , ಸೋನಿಯಾ ಡಿಸೋಜಾ ದಕ್ಷಿಣ ಜಿಲ್ಲಾದ್ಯಕ್ಷ ಸುದೀಪ್ ನೇಸರಕರ, ಯುವ ಘಟಕದ ಅಧ್ಯಕ್ಷರಾದ ಜುನೇದ್, ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!