Dharwad

ಕ್ಯಾಥೋಲಿಕ್ ಸನ್ಯಾಸಿಯರ ಬಂಧನ ಖಂಡಿಸಿ ಧಾರವಾಡದಲ್ಲಿ ಪ್ರತಿಭಟನೆ… ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹ

Share

ಛತ್ತೀಸ್‌ಗಡದಲ್ಲಿ ಇಬ್ಬರು ಕ್ಯಾಥೋಲಿಕ್ ಸನ್ಯಾಸಿನಿಯರನ್ನು ಬಂಧಿಸಿರುವುದನ್ನು ಖಂಡಿಸಿ, ಧಾರವಾಡದಲ್ಲಿ ಪ್ರತಿಭಟನೆ ಮಾಡಿ ಬಿಡುಗಡೆ ಆಗ್ರಹಿಸಲಾಯಿತು.

ಸಂವಿಧಾನ ಸಂರಕ್ಷಕರ ಪಡೆ ಹಾಗೂ ಸಾಧನಾ ರಾಷ್ಟ್ರೀಯ ಮಹಿಳಾ ವೇದಿಕೆ ನೇತೃತ್ವದಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸನ್ಯಾಸಿಗಳ ಬಂಧನ ಖಂಡಿಸಲಾಯಿತು. ಹಲವು ವರ್ಷಗಳಿಂದ ಈ ಸಮಾಜಕ್ಕೆ ಕ್ಯಾಥೋಲಿಕ್ ಸಮುದಾಯ ಉತ್ತಮ ಕೊಡುಗೆ ನೀಡುತ್ತಿದೆ. ಶಿಕ್ಷಣ ಸೇರಿ ಆರೋಗ್ಯದ ಬಗ್ಗೆ ಸಾಕಷ್ಟು ಕೆಲಸ ಮಾಡಲಾಗುತ್ತಿದೆ. ಆದರೆ, ಛತ್ತೀಸ್‌ಗಡದಲ್ಲಿ ಕ್ಯಾಥೋಲಿಕ್ ಸನ್ಯಾಸಿನಿಯರನ್ನು ಬಂಧಿಸಿ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಡಿಸಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.

Tags:

error: Content is protected !!