Chikkodi

ಮದ್ಯ ಮಾರಾಟ ನಿಷೇಧಿಸಲು ಆಗ್ರಹಿಸಿ ಪ್ರತಿಭಟನೆ

Share

ಚಿಕ್ಕೋಡಿ: ಮದ್ಯ ಮಾರಾಟ ನಿಷೇಧಿಸಲು ಆಗ್ರಹಿಸಿ ನಿಪ್ಪಾಣಿ ತಾಲೂಕಿನ ಮಾಣಕಾಪುರ ಗ್ರಾಮಸ್ಥರು ಸ್ಥಳೀಯ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನ್ಯಾಯವಾದಿ ಸಚಿನ್ ಶಿಂಧೆ ಹಾಗೂ ದಲಿತ ಸಮಾಜದ ಹಿರಿಯ ಮುಖಂಡ ರಾಹುಲ್ ವರಾಳೆ ನೇತೃತ್ವದಲ್ಲಿ ಸೇರಿದ್ದ ನೂರಾರು ಮಹಿಳೆ ಯರು ಕಳೆದ ಹಲವು ವರ್ಷಗಳಿಂದ ಗ್ರಾಮದಲ್ಲಿ ನಡೆಯುತ್ತಿರುವ ಮದ್ಯ ದಂಗಡಿ ಯಿಂದ ಸ್ಥಳೀಯ ಯುವಜನ ಹಾಳಾಗುತ್ತಿದ್ದು, ಅದನ್ನು ಕೂಡಲೆ ಸ್ಥಗಿತ ಗೊಳಿಸಬೇಕು,” ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಲುಗ್ರಾಪಂ ಅಧ್ಯಕ್ಷ ಸುನೀಲ ಮ್ಹಾಕಾಳೆ, ಪಿಡಿಒ ನಂದಕುಮಾರ ಪಫೆ ಬಾರದಿರುವುದಕ್ಕೆ ಪ್ರತಿಭಟನಾ ಕಾರರು ರೊಚ್ಚಿಗೆದ್ದರು. ಗ್ರಾಪಂ ಸದಸ್ಯ ಜಯಪಾಲ ಮಾಳಿ, ಸಮಾಜ ಸೇವಕ ಧನಂಜಯ ಮಾಳಿ ಅವರ ಉಪಸ್ಥಿತಿಯಲ್ಲಿ ಸಹಾಯಕ ಬಾಬಾಸಾಹೇಬ ಅರಗೆ ಮನವಿ ಸ್ವೀಕರಿಸಿದರು.

Tags:

error: Content is protected !!