Vijaypura

ಟೋಲ್ ಪ್ಲಾಜಾದಲ್ಲಿ ಪ್ರತಿಭಟನೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ

Share

ಟೋಲ್ ನಾಕಾ ಸುತ್ತಮುತ್ತಲಿನ ಗ್ರಾಮಗಳ ವಾಹನಗಳಿಗೆ ಶುಲ್ಕ ವಿಧಿಸುತ್ತಿರುವದನ್ನು ಖಂಡಿಸಿ ವಿವಿಧ ಗ್ರಾಮಗಳ ಜನರು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್ ಪ್ಲಾಜಾ ಬಳಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ವಿಜಯಪುರ ಜಿಲ್ಲೆಯ ಬಸನಬಾಗೇವಾಡಿ ತಾಲೂಕಿನ ಮುಳವಾಡ ಬಳಿ ಎನ್ ಎಚ್ 50 ರಲ್ಲಿನ ಟೋಲ್ ಪ್ಲಾಜಾದಲ್ಲಿ ಸುತ್ತಮುತ್ತಲಿನ 20 ವ್ಯಾಪ್ತಿಯ ಗ್ರಾಮಗಳ ವಾಹನಗಳಿಗೆ ಶುಲ್ಕ ವಿಧಿಸಬಾರದು ಎಂದು ಆಗ್ರಹಿಸಿ ರೈತರು ಹಾಗೂ ಗ್ರಾಮಸ್ಥರು ಟೋಲ್ ಪ್ಲಾಜಾ ಎದುರಿಗೆ ಕುಳಿತು ಪ್ರತಿಭಟಿಸಿದರು. ಪ್ರತಿಭಟನೆ ಕಾರಣ ಎನ್ ಎಚ್ 50 ರಲ್ಲಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿ ಸಾಲುಗಟ್ಟಿ ನಿಂತ ವಿವಿಧ ವಾಹನಗಳ ಚಾಲಕರು, ಪ್ರಯಾಣಿಕರಿಗೆ ತೊಂದರೆ ಅನುಭವಿಸಿದರು. ಕಾನೂನು ಬಾಹೀರವಾಗಿ ಶುಲ್ಕ ವಸೂಲಿ ಮಾಡುತ್ತಿದೆ ಎಂದು ಪ್ರತಿಭಟನಾಕರರ ಆರೋಪಿಸಿದರು.

ಈ ವೇಳೆ ಸ್ಥಳಕ್ಕೆ ಕೊಲ್ಹಾರ ಪೊಲೀಸರ ಆಗಮಿಸಿ ಪ್ರತಿಭಟನಾಕಾರ ರೊಂದಿಗೆ ಮಾತುಕತೆ ನಡೆಸಿದರು. ಯಾರಿಗೆಲ್ಲಾ ಶುಲ್ಕ ವಿಧಿಸಲಾಗುತ್ತಿದೆ ಎಂಬ ದಾಖಲಾತಿಗಾಗಿ ಪ್ರತಿಭಟನಾಕಾರರ ಒತ್ತಾಯಿಸಿದರು. ಟೋಲ್ ವ್ಯಾಪ್ತಿಯ ಗ್ರಾಮಗಳ ಜನರಿಗೆ ಶುಲ್ಕ ವಿಧಿಸಬಾರದು ಎಂದು ಆಗ್ರಹಿಸಿದರು. ಬಳಿಕ ಪೊಲೀಸರ ಮನವಿ ಮೇರೆಗೆ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆ ಬಳಿಕ ಡೋಲ್ ಪ್ಲಾಜಾ ಸಿಬ್ಬಂದಿ ಶುಲ್ಕ ವಿಧಿಸದೇ ಯಾವುದೇ ವಾಹನಗಳಿಗೆ ಶುಲ್ಕ ವಿಧಿಸದೇ ಪ್ರಯಾಣಕ್ಕೆ ಮಾಡಿಕೊಟ್ಟರು.

Tags:

error: Content is protected !!