Bagalkot

ಕಳ್ಳರನ್ನು ಓಡಿಸಲು ದಿಟ್ಟತನ ಮೆರೆದ ಮಹಿಳೆ ಪೃಥ್ವಿ

Share

ಖದೀಮ ಕಳ್ಳರು ಹಿಂದಿಯಲ್ಲಿ ಮಾತನಾಡುತ್ತಾ ಬಳಿಕ ಗಮನ ಬೇರೆಡೆ ಸೆಳೆದು ಸರಗಳ್ಳತನಕ್ಕೆ ಯತ್ನಿಸಿದ ಸಮಯದಲ್ಲಿ ಮಹಿಳೆಯೊಬ್ಬಳು ತನ್ನ ಸಮಯ ಪ್ರಜ್ಞೆಯಿಂದ ಎಚ್ಚೆತ್ತು ಕಳ್ಳರಿಗೆ ಜಿರಲೆ ಸ್ಪ್ರೇ ಸಿಂಪಡಿಸಿ ಓಡಿಸಿದ ಘಟನೆ ಜರುಗಿದೆ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಗೌತಮ ಬುದ್ಧ ಕಾಲೋನಿಯಲ್ಲಿರೋ ಪೃಥ್ವಿ ಎಂಬ ಮಹಿಳೆ ಒಂಟಿಯಾಗಿ ಇರೋದನ್ನು ಗಮನಿಸಿ ಮದ್ಯಾಹ್ನವೇ ಮನೆಗೆ ಹೊಂಚು ಹಾಕಿದ್ದ ಖದೀಮ ಕಳ್ಳರು ಮೊದಲು ಹಿಂದಿ ಭಾಷೆಯಲ್ಲಿ ಮಾತು ಆರಂಭಿಸಿ ಬಳಿಕ ಗಮನ ಬೇರೆಡೆ ಸೆಳೆದು ಸರಗಳ್ಳತನಕ್ಕೆ ಯತ್ನಸಿದ್ದಾರೆ ತಕ್ಷಣ ಆ ಮಹಿಳೆ ಸಮಯ ಪ್ರಜ್ಞೆಯಿಂದ ಎಚ್ಚೆತ್ತು ಪಕ್ಕದಲ್ಲಿಯೇ ಇದ್ದ ಜಿರಲೆ ಸ್ಪ್ರೇ ಸಿಂಪಡಿಸಿದ್ದಾರೆ ಇದರಿಂದ ವಿಚಲಿತರಾಗಿ ತಕ್ಷಣ ಕಳ್ಳರು ಸ್ಥಳದಿಂದ ಕಾಲ್ಕಿತ್ತು ಒಡಿ ಹೋಗಿದ್ದಾರೆ ಘಟನಾ ಸ್ಥಳಕ್ಕೆ ಜಮಖಂಡಿ ಪೊಲೀಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ

Tags:

error: Content is protected !!