ಕನ್ನಡ ಭಾಷಾ ಸಮುಗ್ರ ಅಭಿವೃದ್ಧಿ ವಿಧೇಯಕ 2022ರನ್ನು ಜಾರಿಗೊಳಿಸುತ್ತಿರುವ ಮಹಾನಗರ ಪಾಲಿಕೆ ಇಲ್ಲಿ ಕೆಲಸ ಮಾಡುತ್ತಿರುವ ಕೆಲ ಸಿಬ್ಬಂದಿ ಎಂಇಎಸ್ ಪುಂಢರಿಗೆ ಮಾಹಿತಿ ನೀಡುತ್ತಿದ್ದಾರೆ ಅಂತವರನ್ನು ಕಂಡು ಹಿಡಿದು ಬೇರೆ ಪಾಲಿಕೆಗೆ ವರ್ಗಾವಣೆಗೊಳಿಸಬೇಕೆಂದು ಒತ್ತಾಯಿಸಿ ಬುಧವಾರ ಕಿತ್ತೂರು ಕರ್ನಾಟಕ ಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬೆಳಗಾವಿಯಲ್ಲಿ ಶೇ 60 ರಷ್ಟು ಕನ್ನಡಕ್ಕೆ ಆಧ್ಯತೆ ನೀಡಬೇಕು ಸೂಚಿಸಿದ್ದರು ಅದರಂತೆ ಮಹಾನಗರ ಪಾಲಿಕೆಯ ಆಯುಕ್ತರು ಮೇಯರ ಹಾಗೂ ಉಪ ಮೇಯರ ವಾಗನಗಳಿಗೆ ಕನ್ನಡ ನಾಮಫಲಕ ಅಳವಡಿಸಿದ್ದಾರೆ ಬೆಳಗಾವಿ ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕನ್ನಡದಲ್ಲಿ ನಾಮಫಲಕ ಹಾಗೂ ಅಂಕಿಸಂಖ್ಯೆಗಳನ್ನು ಬಳಸಲು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ
ಕಿತ್ತೂರು ಕರ್ನಾಟಕ ಸೇನೆಯ ಅಧ್ಯಕ್ಷ ಮಹಾದೇವ ತಳವಾರ ಮಾತನಾಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದವರು ಇತ್ತಿಚೆಗೆ ಬೆಳಗಾವಿಗೆ ಬಂದು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯಲ್ಲಿ ಸಭೆ ನಡೆಸಿ ಬೆಳಗಾವಿಯಲ್ಲಿ ಶೇ 60 ರಷ್ಟು ಕನ್ನಡಕ್ಕೆ ಆಧ್ಯತೆ ನೀಡಬೇಕು ಸೂಚಿಸಿದ್ದರು ಅದರಂತೆ ಮಹಾನಗರ ಪಾಲಿಕೆಯ ಆಯುಕ್ತರು ಮೇಯರ ಹಾಗೂ ಉಪ ಮೇಯರ ವಾಗನಗಳಿಗೆ ಕನ್ನಡ ನಾಮಫಲಕ ಅಳವಡಿಸಿದ್ದಾರೆ ಅದನ್ನು ವಿರೋಧಿಸಿ ಕೆಲವೊಂದು ಎಂಇಎಸ್ ನವರು ಹೋಗಿ ಕನ್ನಡ ಕಡ್ಡಾಯಗೊಳಿಸುವುದನ್ನು ರದ್ದು ಮಾಡಿ ಎಂದು ಮನವಿ ಮಾಡಿದ್ದಾರೆ ಬೆಳಗಾವಿಯಲ್ಲಿ ಮರಾಠಿ ಭಾಷೆಗೆ ಆಧ್ಯತೆ ನೀಡಬಾರದು ಕನ್ನಡ ಭಾಷೆಗೆ ಆಧ್ಯತೆ ನೀಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದರು
ದೇವೆಂದ್ರ ತಳವಾರ, ಸಂತೋಷ ಕಳ್ಳಿಮನಿ, ವಾಸು ಬಸನಾಯ್ಕರ, ಶಶಿಕಾಂತ ಅಷ್ಟೇಕರ, ಭರಮಪ್ಪಾ ಕಾಂಬಳೆ, ಸಿದ್ರಾಯಿ ನಾಯಿಕ, ಮಾರುತಿ ದೊಡ್ಡಲಕ್ಕಾಪ್ಪಗೋಳ ಸೇರಿಂದತೆ ಮುಂತಾದವರು ಈ ಸಂದರ್ಭದಲ್ಲಿದ್ದರು.