ಶ್ರಾವಣ ಮಾಸ ಎಂದರೆ ಉತ್ತರ ಕರ್ನಾಟಕದಲ್ಲಿ ಜಾತ್ರೆ ಗಳದ್ದೇ ಕಾರುಬಾರು. ಗ್ರಾಮ ದೇವತೆಗಳ ಜಾತ್ರೆಯನ್ನು ಅದ್ದೂರಿಯಾಗಿ ಸಂಭ್ರಮದಿಂದ ಆಚರಿಸುತ್ತಾರೆ. ಹೀಗೆಯೇ ದೇವಿ ಜಾತ್ರೆಯಲ್ಲಿ ಪೂಜಾರಿಯೊಬ್ಬ ತಲೆಯ ಮೇಲೆ ತೆಂಗಿನಕಾಯಿ ಒಡೆದುಕೊಂಡ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ನಗರದ ಹರಣ ಶಿಖಾರಿ ಕಾಲೋನಿಯಲ್ಲಿ ಮರಗಮ್ಮ ದೇವಿ ಜಾತ್ರೆ ನಡೆಯಿತು. ಜಾತ್ರೆ ಅಂಗವಾಗಿ ಅದ್ದೂರಿ ಮೆರವಣಿಗೆ ಸಹ ನಡೆಯಿತು.
ಈ ವೇಳೆ ದೇವಿ ಪೂಜಾರಿ ತಲೆಯ ಮೇಲೆ ತೆಂಗಿನಕಾಯಿ ಒಡೆದುಕೊಂಡು ಪವಾಡ ಪ್ರದರ್ಶಿಸಿದ್ದಾನೆ. ನಗರದ ಗಾಂಧಿ ವೃತ್ತದಲ್ಲಿ ಮೆರವಣಿಗೆ ಬರ್ತಿದ್ದಂತೆ ಪೂಜಾರಿ ತೆಂಗಿನಕಾಯಿಗಳಿಂದ ತಲೆ ಮೇಲೆ ಹೊಡೆದುಕೊಂಡು ಭಕ್ತಿ ಪ್ರದರ್ಶಿಸಿದ್ದಾನೆ. ಪೂಜಾರಿ ತಲೆ ಮೇಲೆ ತೆಂಗಿನಕಾಯಿ ಒಡೆದುಕೊಳ್ತಿದ್ರೆ ಜನರು ನಿಬ್ಬೆರಗಾಗಿ ನೋಡಿದ್ರು. ಇನ್ನೂ ವಿದೇಶಿ ಪ್ರವಾಸಿಗರು ಪೂಜಾರಿ ಸಾಹಸವನ್ನು ಹುಬ್ಬೇರಿಸಿ ನೋಡಿದ್ದು ವಿಶೇಷವಾಗಿತ್ತು.