ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಮಾಧ್ಯಮಗಳು ಈ ಮೂವರು ಸೇರಿಕೊಂಡು ಜವಾಬ್ದಾರಿಯಿಂದ ಕೆಲಸ ನಿರ್ವಹಿದರೇ, ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಬೆಳಗಾವಿ ಉತ್ತರ ಶಾಸಕ ಆಸೀಫ ಸೇಠ್ ಹೇಳಿದರು. ಬೆಳಗಾವಿಯ ಕನ್ನಡ ಭವನದಲ್ಲಿ ಬೆಳಗಾವಿ ಜಿಲ್ಲಾ ಎಲೆಕ್ರ್ಟಾನಿಕ ಮಿಡೀಯಾ ಜನಲಿಸ್ಟ್ ಅಸೋಸಿಯೇಶನ್’ನ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಉಪಸ್ಥಿತ ಗಣ್ಯರಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಮುದ್ರಣ ಮಾಧ್ಯಮ ಹಾಗೂ ಎಲೆಕ್ರ್ಟಾನಿಕ ಮಾಧ್ಯಗಳಲ್ಲಿ ಸೇವೆ ಸಲ್ಲಿಸಿರುವ ಸುಭಾನಿ ಮುಲ್ಲಾ, ಲೋಹಿತ ಶಿರೋಳ, ರಮೇಶ ಹಿರೇಮಠ, ರವಿರಾಜ, ನಾಗರಾಜ ಸೇರಿದಂತೆ ಮುಂತಾದವರನ್ನು ಸನ್ಮಾನಿಸಿ ಗೌರವಿಸಲಾಯಿತು
ವೇಳೆ ಮಾತನಾಡಿದ ಶಾಸಕ ಆಸೀಫ್ ಸೇಠ್ ಅವರು ಮಾತನಾಡಿ ಈ ಹಿಂದಿನಗಳಲ್ಲಿ ಬಹಳಷ್ಟು ಪತ್ರಿಕೆಗಳು ಟಿವ್ಹಿಗಳು ಈರಲಿಲ್ಲ ತರುಣ ಭಾರತ ಮುಂಜಾನೆ ಜನರ ಕೈ ಸೇರುತ್ತಿತ್ತು ಟೈಮ್ಸ್ ಆಫ್ ಇಂಡಿಯಾ ಮುಂಬೈನಿಂದ 3 ದಿನಗಳ ನಂತರ ಬಂದು ಜನರ ಕೈ ಸೇರುತ್ತಿತ್ತು ಎಂದು ಹಳೆಯ ನೆನಪುಗಳನ್ನು ಮೇಲಕು ಹಾಕಿದರು. ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಸಮಾಜದಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ತರವಾಗಿದೆ. ಆಧುನಿಕ ತಂತ್ರಜ್ಞಾನದ ಮೂಲಕ ಸುದ್ಧಿಗಳು ಈಗ ಭಿತ್ತರವಾಗುತ್ತಿದ್ದು, ಟಿ.ವ್ಹಿಗಿಂತಲೂ ಮೊಬೈಲ್’ನಲ್ಲಿಯೂ ಪ್ರಸಾರವಾಗುತ್ತಿವೆ. ಸವಾಲುಗಳನ್ನು ಮೆಟ್ಟಿ ಮಾಧ್ಯಮಗಾರರು ಕೆಲಸಗಳನ್ನು ಮಾಡುತ್ತಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಭೀಮಾಶಂಕರ್ ಗುಳೇದ್ ಅವರು, ಸುದ್ಧಿಗಳಲ್ಲಿ ನೈಜತೆಯನ್ನು ಕಾಪಾಡುವುದು ಅತ್ಯಂತ ಮಹತ್ವ. ಸದಾ ಭಾವನೀಕ ವರದಿಗಳನ್ನೇ ಮಾಡದೇ, ಸಮಾಜಕ್ಕೆ ಬೇಕಾದ ಸಂದೇಶಗಳನ್ನು ನೀಡಬೇಕು. ಘಟನೆಯ ನೈಜತೆಯನ್ನು ಬಿಟ್ಟು ವಿರೂಪವಾಗಿ ಸುದ್ಧಿಯನ್ನು ಭಿತ್ತರಿಸಬಾರದು. ಸೋಷಿಯಲ್ ಮೀಡಿಯಾ ಜರ್ನಲಿಸಂನಿಂದ ಉಂಟಾಗುವ ಕೆಡಕು ಪರಿಣಾಮಗಳನ್ನು ತಡೆಯಲು ಕೇಲವು ಬಾರಿ ಅಂಕುಶ ಬೇಕಾಗುತ್ತದೆ. ಇದನ್ನ ತಡೆಯಲು ಇರುವ ಮಹತ್ತವ ಮಾಧ್ಯಮವೆಂದರೇ ದೃಶ್ಯ ಮತ್ತು ಪತ್ರಿಕಾ ಮಾಧ್ಯಮ ಎಂದರು.
ಇನ್ನು ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರು, ಹೆಚ್ಚುತ್ತಿರುವ ಜನಸಂಖ್ಯೆಯೂ ಆಧುನಿಕ ಜಗತ್ತಿಗೆ ಒಂದು ಸವಾಲಾಗಿ ಪರಿಣಮಿಸಿದೆ. ಆದರೇ, ಮಾಧ್ಯಮಗಳು ಇದಕ್ಕೆ ಜಾಗೃತಿಯನ್ನು ಮೂಡಿಸುವ ಕೆಲಸಗಳನ್ನು ಮಾಡುತ್ತವೆ. ಸ್ಥಳೀಯ ವರದಿಗಳು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತವೆ. ಸಕಾರಾತ್ಮಕ ಸುದ್ಧಿಗಳು ಸದೃಢ ಸಮಾಜ ನಿರ್ಮಿಸುತ್ತವೆ ಎಂದರು. ಇನ್ನು ವಿಟಿಯ್ಹೂನ ಕುಲಪತಿಗಳು ಪತ್ರಿಕಾ ಮಾಧ್ಯಮಗಳನ್ನು ಗುರಿಯಾಗಿಸುವ ಬದಲೂ, ಅದರಲ್ಲಿನ ನೈಜತೆಯನ್ನು ಅರಿತು ಬಾಳಬೇಕು. ಪತ್ರಿಕಾ ಮಾಧ್ಯಮಗಳಿಂದ ಹೆದರಿಕೊಂಡು ಅಲ್ಲ ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. ಪತ್ರಿಕೆಗಳು ಸದಾ ಬದುಕಬೇಕೆಂದರು.
ಕಾರ್ಯಕ್ರಮದ ವೇದಿಕೆ ಮೇಲೆ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಮಾಜಿ ಶಾಸಕ ಸಂಜಯ ಪಾಟೀಲ, ಜಿಲ್ಲಾಧಿಕಾರಿ ಮಹ್ಮದ ರೋಷನ್, ಡಿಸಿಪಿ ರೋಹನ್ ಜಗದೀಶ್, ವಿಲಾಸ ಜೋಶಿ, ಮಂಜುನಾಥ ಪಾಟೀಲ ಸಂತೋಷ ಶ್ರೀರಾಮುಡು, ಸಹದೇವ ಮಾನೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.