ಅಥಣಿ: ಲಾಂಗ್ ತೋರಿಸಿ ರೀಲ್ಸ್ ಮಾಡಿದ್ದ ಯುವಕನಿಗೆ ಅಥಣಿ ಪೊಲೀಸರು ವಾರ್ನಿಂಗ್ ನೀಡಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನಾಗನೂರು ಪಿ ಎ ಗ್ರಾಮದ ಯುವಕ ಗಣೇಶ ರಮೇಶ್ ಚೋಗಲಾ (23) ಇನ್‌ಸ್ಟಾಗ್ರಾಂನಲ್ಲಿ ಲಾಂಗ್ ಹಿಡಿದು ರಿಲ್ಸ್ ಮಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಾರ್ವಜನಿಕ ಸ್ಥಳದಲ್ಲಿ ಈ ರೀತಿಯ ವರ್ತನೆಯನ್ನು ತೋರಿದ ಹಿನ್ನೆಲೆ ಅಥಣಿ ಪೊಲೀಸರು ತಕ್ಷಣ ಕ್ರಿಯಾಶೀಲವಾಗಿದ್ದು, ಯುವಕನನ್ನು ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಿದ್ದಾರೆ.ಪೋಲೀಸರ ಮುಂದೆ ಯುವಕನಿಗೆ ಸೂಕ್ತ ರೀತಿಯಲ್ಲಿ ಬುದ್ಧಿವಾದ ನೀಡಿ ಇಂತಹ ಕೃತ್ಯ ಮುಂದೆಯೇ ಮರುಕಳಿಸದಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ರೀತಿ ನಡೆದುಕೊಳ್ಳುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.