ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ರೌಡಿಶೀಟರ್‌ಗಳ ಕಾನೂನು ಉಲ್ಲಂಘನೆ ಕಡಿವಾಣ ಹಾಕುವ ಉದ್ದೇಶದಿಂದ, ಇಂದು ಮುಂಜಾನೆ ಮೂರು ಪೊಲೀಸ್ ಠಾಣೆಯ ಸಿಬ್ಬಂದಿಗಳು ತಮ್ಮ ಠಾಣೆ ವ್ಯಾಪ್ತಿಯ ರೌಡಿಗಳನ್ನು ಕರೆದುಕೊಂಡು ಬಂದು ಖಡಕ್ ಎಚ್ಚರಿಕೆ ನೀಡಿದರು.
ಇತ್ತೀಚೆಗೆ ಕಂಠಿಗಲ್ಲಿಯಲ್ಲಿ ಕೊಟ್ಟ ಸಾಲ ಕೇಳಲು ಹೋಗಿ ಸಾಲ ಪಡೆದ ತಮ್ಮಣ್ಣಿಗೆ ಯುವಕನೊಬ್ಬ ಚಾಕು ಇರಿದಿದ್ದ, ಇದರಿಂದ ಶಾಂತವಾಗಿದ ಧಾರವಾಡ ಬೆಚ್ಚಿಬಿದಿತ್ತು. ಈ ಹಿನ್ನೆಲೆಯಲ್ಲಿ ಇಂದು ಧಾರವಾಡ ಎಸಿಪಿ ಪ್ರಶಾಂತ ಸಿದ್ಧನಗೌಡರ್ ಅವರ ನೇತೃತ್ವದಲ್ಲಿ ಮೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರೌಡಿಶೀಟರ್‌ಗಳ ಪೆರೇಡ್ ಮಾಡಲಾಯಿತು. ಶಹರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ನಾಗೇಶ, ವಿದ್ಯಾಗಿರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಂಗಮೇಶ ಹಾಗೂ ಉಪನಗರ ಠಾಣೆ ಇನ್ಸ್ಪೆಕ್ಟರ್ ದಯಾನಂದ ಅವರ ನೇತೃತ್ವದಲ್ಲಿ ತಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ರೌಡಿಶೀಟರ್‌ಗಳನ್ನು ಠಾಣೆಗೆ ಕರೆಸಲಾಯಿತು. ಹೀಗೆ ಪೊಲೀಸ್ ಠಾಣೆಯ ಆವರಣ ಸೇರಿ ಸಭಾಭವನದಲ್ಲಿ ಕರೆತಂದ ರೌಡಿಗಳಿಗೆ ಠಾಣೆಗಳ ಇನ್ಸ್ಪೆಕ್ಟರ್ ಹಾಗೂ ಎಸಿಪಿಯವರು ಕಾನೂನು ಬಾಹಿರ ಚಟುವಟಿಕೆಗಳಿಂದ ಎಲ್ಲರು ದೂರವಿರಬೇಕು. ಯಾರಾದರೂ ಕಾನೂನು ಉಲ್ಲಂಘನೆ ಮಾಡುತ್ತಿದ್ದರೆ ಬೀಡುವ ಮಾತಲ್ಲ. ಕಾನೂನು ಗೌರವಿಸಿ ಎಲ್ಲರೂ ಬದುಕು ಕಟ್ಟಿಕೊಳ್ಳಿ ಎಂದು ಖಡಕ್ ಎಚ್ಚರಿಕೆ ನೀಡಿದರು. ಇನ್ನೂ ರೌಡಿಶೀರಗಳು ಕೆಲವರು ಸಂಚಾರಿ ನಿಯಮ ಉಲ್ಲಂಘಸಿ ಓಡಾಡುತ್ತಿದ್ದವರ ಸುಮಾರು 18 ಬೈಕ ವಶಕ್ಕೆ ಪಡೆದು ದಂಡ ಹಾಕಲಾಯಿತು. ಒಟ್ಟಿನಲ್ಲಿ ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈಗ ಧಾರವಾಡ ವ್ಯಾಪ್ತಿಯಲ್ಲಿನ ರೌಡಿಶೀಟರ್‌ಗಳಿಗೆ ಪರೇಡ್ ಮಾಡಿ ಪೊಲೀಸ್ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.