ಕಾಗವಾಡ ತಾಲೂಕಿನ ಉಗಾರ ಸಕ್ಕರೆ ಕಾರ್ಖಾನೆಯ ಉದ್ಯಮಿ ರಾಜಾಭಾವು ಶರಗಾಂವಕರ ಇವರ ಧರ್ಮಪತ್ನಿ ಹಾಗೂ ಸಂಗೀತ ಪ್ರೇಮಿ ಆಗಿರುವ ಉಗಾರ ಮಹಿಳಾ ಮಂಡಳ ಅಧ್ಯಕ್ಷೆ ದಿವಂಗತ ಮೀನಾತಾಯಿ ಶಿರಗಾಂವಕರ ಇವರ 29 ಪುಣ್ಯ ಸ್ಮರಣೆ ನಿಮಿತ್ಯ ಹುಬ್ಬಳ್ಳಿಯ ಖ್ಯಾತ ಶಾಸ್ತ್ರೀಯ ಸಂಗೀತ ಪಂಡಿತರಾದ ಶಿವತೀರ್ಥ ಮೆವುಂಡಿ ಇವರ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ರವಿವಾರ ಸಂಜೆ ಉಗಾರದ ಮಹಿಳಾ ಮಂಡಳ ಇವರಿಂದ ವಿಹಾರ ಸಭಾಭವನದಲ್ಲಿ ಸಂಗೀತಲಹರಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಪಂಡಿತ ಶಿವತೀರ್ಥ ಮೆವುಂಡಿ, ಉಗಾರ ಮಹಿಳಾ ಮಂಡಳ ಅಧ್ಯಕ್ಷ ಶ್ರೀಮತಿ ರಾಧಿಕಾತಾಯಿ
ಶಿರಗಾಂವಕರ ಹಾಗೂ ಎಲ್ಲ ಸದಸ್ಯರು ಅತಿಥಿಗಳು ದಿವಂಗತ ಮೀನಾತಾಯಿ ಶಿರಗಾಂವಕರ ಇವರು ಪ್ರತಿಮೆಗೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಪಂಡಿತ ಶಿವತೀರ್ಥ ಮೆವುಂಡಿ ಇವರು ಮೇಘ ಮಲ್ಲಾರ ಬಂದಿಶ್ ಶಾಸ್ತ್ರಿಯ ಸಂಗೀತ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ನಾಟ್ಯ ಗೀತೆ ಮೋಹ ಮಾರಿ ನಜರಿಯ ಸಾವರಿಯ, ಬಳಿಕ ಗುರುವೇಣಿ ಯಾಕ ಮೂಕನಾದೆ ಕನ್ನಡ ಗೀತ ಹಾಡಿದರು, ಮರಾಠಿ ಇಂದ್ರಾಯನಿ ಕೋಠಿ ಲಾಗಲಿ ಸಮಾಧಿ ಜ್ಞಾನೇಶಾಚಿ, ಭಾಗ್ಯದ ಲಕ್ಷ್ಮಿ ಬಾರಮ್ಮ ಇಂತಹ ಮಧುರ ಗೀತೆಗಳು ಹಾಡಿದ್ದರಿಂದ.
ಇಲ್ಲಿಯ ಸಂಗೀತ ಪ್ರೇಮಿಗಳು ಭಕ್ತಿಯಲ್ಲಿ ತಲ್ಲಿನರಾಗಿದ್ದರು.
ಸಂಗೀತ ಕಾರ್ಯಕ್ರಮ ಬಳಿಕ ಪಂಡಿತ್
ಶಿವತೀರ್ಥ ಮೆವುಂಡಿ ಇನ್ನು ವಾಹಿನಿ ದೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ನಾನು ಚಿಕ್ಕವನಿದ್ದಾಗ ನಮ್ಮ ಮನೆಯಲ್ಲಿ ಸಂಗೀತ ಶಿಕ್ಷಣ ಪಡೆದುಕೊಂಡೆ, ಗದಗ ಆಶ್ರಮದಲ್ದ ಪುಟ್ಟರಾಜ ಅಜಾವರ ಸಾನಿಧ್ಯದಲ್ಲಿ ಕಿರಣಾ ಹಾಗೂ ಗ್ವಾಲಿಯರ ಮನೆತನದ ಸಂಗೀತ ಪ್ರಭಾವ ಬೀರಿತ್ತು, ಸಂಗೀತ ಸಮರಾತ್ನಿ ಗಂಗೂಬಾಯಿ ಹಾನಗಲ ಇವರಿಂದ ನನಗೆ ಕಿರಣಾ ಮನೆತನದ ಸಂಗೀತ ಪ್ರಭಾವ ಬೀರಿತು. ಪಂಡಿತ್ ಭೀಮ್ ಸೇನ್ ಜೋಶಿ ಇವರ ಶಿಷ್ಯರಾದ ಪಾಳೆಗಾರ್ ನಮ್ಮ ಗುರುಗಳು ಹೀಗೆ ಬೇರೆಯವರಿಂದ ಸಂಗೀತ ಸಂಸ್ಕಾರ ಪಡೆದುಕೊಂಡು ಶಾಸ್ತ್ರೀಯ ಸಂಗೀತದಲ್ಲಿ ದೇಶಾದ್ಯಂತ ವಿಶ್ವದಂಥ ಕನ್ನಡ ಗೀತೆಗಳ ಬಗ್ಗೆ ನನ್ನ ಅಳಲು ಸೇವೆ ಮಾಡುತ್ತಿದ್ದೇನೆ. ಆದರೆ ಸಂಗೀತದಲ್ಲಿ ಘರಾನೆ ಬಗ್ಗೆ ಇಷ್ಟೊಂದು ಒಳ್ಳೆ ಇಲ್ಲ ಕೇವಲ ಸಂಗೀತ ಪ್ರೇಮಿಗಳು ಹಾಡುವನ್ನು ಕೇಳುವುದು ಅಷ್ಟೇ ಉಳಿದಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಶಾಸ್ತ್ರೀಯ ಸಂಗೀತ ಉಳಿಸಿಕೊಳ್ಳಲು ಸರ್ಕಾರ ಸಹಕಾರ ನೀಡಬೇಕು ಸಂಗೀತ ಸಮರಾದ್ನಿ ಗಂಗೂಬಾಯಿ ಹಾನಗಲ್ ಇವರ ಹೆಸರಿನಿಂದ ಪ್ರಾರಂಭಿಸಿದ ಶಾಸ್ತ್ರೀಯ ಸಂಗೀತ ತರಬೇತಿ ಕೇಂದ್ರಗಳು ಮುಚ್ಚಿದ್ದಾರೆ ಬೇರೆ ಬೇರೆ ಸಂಗೀತ ನೀಡುವ ಯುವಕರಿಗೆ ಪ್ರೋತ್ಸಾಹ ನೀಡಲು ಸರ್ಕಾರ ಸಹಾಯ ಮಾಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಬೈಟ್
ಸಮಾರಂಭದಲ್ಲಿ ಸಕ್ಕರೆ ಉದ್ಯಮಿಗಳಾದ ಪ್ರಫುಲ ಶಿರಗಾಂವಕರ, ಚಂದನ ಶಿರಗಾಂಕರ, ಸಚಿನ ಶಿರಗಾಂಕರ, ಮಹಿಳಾ ಮಂಡಳ ಅಧ್ಯಕ್ಷ ಶ್ರೀಮತಿ ರಾಧಿಕಾತಾಯಿ ಶಿರಗಾಂವಕರ, ಉಪಾಧ್ಯಕ್ಷ ಶ್ರೀಮತಿ ಗೀತಾಲಿತಾಯಿ ಶಿರಗಾವ್ಕರ, ಮಾಜಿ ಅಧ್ಯಕ್ಷ ಶ್ರೀಮತಿ
ಸ್ಮಿತಾತಾಯಿ ಶಿರಗೌಕರ, ಮಿರಜದ ಇನ್ವಿಲ ಸಂಸ್ಥೆಯ ಅಧ್ಯಕ್ಷ ಸಾನಿಕಾ ಪ್ರಾಣಿ, ಲಕ್ಷ್ಮಿತಾಯಿ ಶಿರಗೌಕರ, ಮಹಿಳಾ ಮಂಡ ಕಾರ್ಯದರ್ಶಿ ವೈಷ್ಣವಿ ಕುಲಕರ್ಣಿ, ಅನಿತಾ ಕುಲಕರ್ಣಿ ಮೇಘನಾ ಕುಲಕರ್ಣಿ, ಕೀರ್ತಿ
ಸರದೇಸಾಯಿ ಸಕ್ಕರೆ ಕಾರ್ಖಾನೆಯ ಎಲ್ಲ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪಂಡಿತ್ ಜೈತೀರ್ಥ ಇವರಿಗೆ ಹರ್ಮೋನಿಯಂ ಸಾಥ ಸಂಗೀತ್ಕಾರ ಹಾಗೂ ಸಕ್ಕರೆ ಕಾರ್ಖಾನೆ ಅಧಿಕಾರಿ ಸುರೇಶ್
ಸರದೇಸಾಯಿ ನೀಡಿದರು, ಹೇಮಂತ ಜೋಶಿ, ಪಾರ್ಥ ಭುಮಕರ, ಗಿರೀಶ್ ಕುಲಕರ್ಣಿ ಇವರು ಸಹಕಾರ ನೀಡಿದರು.