ಕೊರಮ ಕೊರಚ ಜನಾಂಗದ ಮಹಿಳಾ ಅಧ್ಯಕ್ಷೆ ಮೇಲೆ ಹಲ್ಲೆ ನಡೆಸಿರುವ ವಿಚಾರ ಖಂಡಿಸಿ ಧಾರವಾಡದಲ್ಲಿ ಕೊರಮ ಕೊರಚ ಸಮುದಾಯದ ಮುಖಂಡರು ಧಾರವಾಡದಲ್ಲಿ ಬೀದಿಗೆ ಇಳಿದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕುದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಸಮುದಾಯದ ಮುಖಂಡರು ಫ್ರಭಾವತಿಯ ಮೇಲೆ ಹಲ್ಲೆ ನಡೆಸಿದವರು ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಜುದಾಸ್ 5 ರಂದು ಕೊರಮ ಕೊರಚ ಜನಾಂಗದ ಮಹಿಳಾ ಅಧ್ಯಕ್ಷೆ ಫ್ರಭಾವತಿಯ ಮೇಲೆ ಹಲ್ಲೆ ನಡೆಸಲಾಗಿದೆ. ಈ ಹಲ್ಲೆಯು ಸಮಾಜಕ್ಕೆ ತೀವ್ರವಾದ ನೋವುಂಟು ಮಾಡಿದೆ. ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಈ ಕೂಡಲೇ ಮಹಿಳಾ ಅಧ್ಯಕ್ಷೆ ಫ್ರಭಾವತಿಯ ಮೇಲೆ ಹಲ್ಲೆ ನಡೆಸುದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಇದರಲ್ಲಿ ನಿರ್ಲಕ್ಷ್ಯ ಕಂಡು ಬಂದಲ್ಲಿ ಉಗ್ರ ಹೋರಾಟ ರಾಜ್ಯ ವ್ಯಾಪಿ ಮಾಡುವುದಾಗಿ ಎಚ್ಚರಿಕೆ ನೀಡಿದರು.