Belagavi

ವನ್ಯಜೀವಿ, ಮಾನವ ನಡುವಿನ ಸಂಘರ್ಷಕ್ಕೆ ನಮ್ಮ ಕ್ರೂರ ನಡೆಯೇ ಕಾರಣ. – ಗುರುದೇವ ಸಿದ್ಧಾಪೂರಮಠ

Share

ವನ್ಯಪ್ರಾಣಿಗಳು ಕಾಡು ಬಿಟ್ಟು ನಾಡಿನತ್ತ ಹೆಜ್ಜೆ ಹಾಕುತ್ತಿರುವದಕ್ಕೆ ನಮ್ಮ ಕ್ರೂರ ನಡೆಯೇ ಕಾರಣ ಎಂದು ಗೋಕಾಕನ ಲೈನ್ಸ್ ಇಂಟರ್ ನ್ಯಾಶನಲ್ ಸಂಸ್ಥೆಯ ಜಂಟಿ ಕಾರ್ಯದರ್ಶಿ, ಗುರುದೇವ ಸಿದ್ದಾಪುರಮಠ ಹೇಳಿದರು.

ಅವರು ಗುರುವಾರ ಅಡವಿಸ್ವಾಮಿ ಶರಣರು, ಬೆಳಗಾವಿ ವನ್ಯಜೀವಿ ಪರಿಸರ ಅಭಿವ್ರದ್ಧಿ ವೇದಿಕೆ ಮತ್ತು ಲೈನ್ಸ್ ಕ್ಲಬ್ ಗೋಕಾಕ ಇವರ ಸಹಯೋಗದಲ್ಲಿ ಶ್ರಾವಣ ಮಾಸದ ನಿಮಿತ್ತ ಅಡವಿಸಿದ್ದೇಶ್ವರ ಶರಣ ಸದ್ಭಕ್ತರಿಂದ ಅಕ್ಕತಂಗೇರಹಾಳ ಗ್ರಾಮದ ಶ್ರೀ ದುರ್ಗಾ ದೇವಸ್ಥಾನದಿಂದ ಶ್ರೀ ಕ್ಷೇತ್ರ ಉಳವಿ ಗೆ ಹಮ್ಮಿಕೊಂಡಿದ್ದ ಚಾಲನೆ ನೀಡಿ ಮಾತನಾಡಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಗೋಕಾಕ ಲೈನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಶೈಲ ಹಂಜಿ ಮಾತನಾಡಿ, ಪಾದಯಾತ್ರಾರ್ಥಿಗಳು ಶರಣ ತತ್ವ ಮತ್ತು ಸಿದ್ಧಾಂತ ಗಳನ್ನು ಅನುಸರಿಸುವದರ ಮೂಲಕ ಶಿವ ಶರಣರ ನಾಡದ ಈ ಕುಂದರನಾಡು ಸಕಲ ಸಂಪತ್ತಿನ ಬೀಡಾಗಲಿ ಎಂದರಲ್ಲದೆ, ಬದುಕಿನಲ್ಲಿ ಶಿಸ್ತು ಮತ್ತು ಸಂಯಮದಿಂದ ವರ್ತಿಸಿ, ಇತರರಿಗೆ ಸ್ಫೂರ್ತಿಯಾಗಬೇಕು ಎಂದರು.

ಶ್ರೀ ದುರ್ಗಾ ದೇವಸ್ಥಾನದ ಅಧ್ಯಕ್ಷ ವೀರನಗೌಡಾ ಈಶ್ವರಪ್ಪಗೋಳ, ಪಾದಯಾತ್ರಾ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಬೆಳಗಾವಿ ಶ್ರೀ ಬಸವೇಶ್ವರ ಇಲೆಕ್ಟ್ರಿಕಲ್ಸ್ ಗುತ್ತಿಗೆದಾರ ಬಸವರಾಜ ಮಠಪತಿ. ವನ್ಯಜೀವಿ ಪರಿಸರ ಅಭಿವ್ರದ್ಧಿ ವೇದಿಕೆ ಅದ್ಯಕ್ಷ ಸುರೇಶ ಉರಬಿನಟ್ಟಿ ಇನ್ನುಳಿದವರು ಭಾಗಿಯಾಗಿದ್ಧರು

Tags:

error: Content is protected !!