BELAGAVI

ಗಡಿಯಲ್ಲಿ ಕನ್ನಡ ಕಡ್ಡಾಯಕ್ಕೆ ವಿರೋಧ…

Share

ಗಡಿಭಾಗದಲ್ಲಿ ಶೇ.15ಕ್ಕಿಂತ ಹೆಚ್ಚು ಅನ್ಯ ಭಾಷಿಕರಿರುವಾಗಲೂ ಕನ್ನಡ ಕಡ್ಡಾಯ ಆದೇಶ ಜಾರಿಗೊಳಿಸುತ್ತಿರುವುದನ್ನು ವಿರೋಧಿಸಿ ಆಗಸ್ಟ್ ಮೊದಲವಾರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಲಾಗುವುದೆಂದು ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಇಂದು ಬೆಳಗಾವಿಯ ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಭೆಯನ್ನು ಕರೆಯಲಾಗಿತ್ತು. ಮಾಜಿ ಶಾಸಕ ಮನೋಹರ್ ಕಿಣೇಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಡಿಭಾಗದಲ್ಲಿ ಕನ್ನಡ ಕಡ್ಡಾಯ, ಗಡಿ ವಿವಾದ ವಿಚಾರಣೆ, ತಜ್ಞ ಸಮಿತಿ ಸಭೆ ಇನ್ನುಳಿದ ವಿಷಯಗಳ ಕುರಿತು ಚರ್ಚಿಸಲಾಯಿತು.

ಮಾಜಿ ಶಾಸಕ ಮನೋಹರ್ ಕಿಣೇಕರ್ ಅವರು ಗಡಿಭಾಗದಲ್ಲಿ ಕನ್ನಡ ಕಡ್ಡಾಯಗೊಳಿಸಲಾಗುತ್ತಿದೆ. ಆದರೇ, ಗಡಿಭಾಗದಲ್ಲಿ ಶೇ. 15 ಕ್ಕಿಂತ ಹೆಚ್ಚಿನ ಪ್ರತಿಶತ ಮರಾಠಿ ಭಾಷಿಕರಿದ್ದಾರೆ. ನ್ಯಾಯಾಲಯದ ಆದೇಶದಂತೆ ಕನ್ನಡದೊಂದಿಗೆ ಮರಾಠಿ ಭಾಷೆಯಲ್ಲಿಯೂ ಕಾಗದಪತ್ರ ಮತ್ತು ಬೋರ್ಡಗಳನ್ನು ಅಳವಡಿಸಬೇಕು. ಆಗಸ್ಟ್ ಮೊದಲವಾರದಲ್ಲಿ ಕನ್ನಡ ಕಡ್ಡಾಯದ ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನಾ ರ್ಯಾಲಿ ನಡೆಸುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದರು.

ಇನ್ನು ಮಾಲೋಜಿ ಅಷ್ಟೇಕರ ಅವರು ನಮ್ಮ ಪ್ರತಿನಿಧಿಗಳು ತಜ್ಞ ಸಮಿತಿಯೊಂದಿಗೆ ಚರ್ಚೆ ನಡೆಸಿ, ಸಿಎಂ ಮತ್ತು ಸಮನ್ವಯ ಸಚಿವರೊಂದಿಗೆ ಸಂಪರ್ಕ ಸಾಧಿಸಿ ನಮ್ಮ ಸಮಸ್ಯೆಯನ್ನು ತಿಳಿಸಲಿದ್ದಾರೆ. ಶೀಘ್ರದಲ್ಲೆ ತಜ್ಞ ಸಮಿತಿಯೊಂದಿಗೆ ಭೇಟಿ ನೀಡಿ ಚರ್ಚಿಸಲಿದ್ದೇವೆ. ಸಮಿತಿಯ ಅಧ್ಯಕ್ಷರು ಗಡಿಭಾಗದ ಹತ್ತಿರ ಸಭೆ ನಡೆಸದೇ, ಗಡಿಭಾಗದಲ್ಲೇ ಸಭೆ ನಡೆಸಬೇಕು ಎಂದರು.

ಈ ಸಂದರ್ಭದಲ್ಲಿ ಗೋಪಾಳರಾವ್ ದೇಸಾಯಿ, ಗೋಪಾಳ್ ಪಾಟೀಲ್, ಬಿ.ಡಿ. ಮೋಹನಗೇಕರ, ಮೋನಪ್ಪ ಪಾಟೀಲ್, ಆರ್.ಕೆ. ಪಾಟೀಲ್, ವಿಠ್ಠಲ ಪಾಟೀಲ್, ಮನೋಹರ್ ಹುಂದರೆ, ರಣಜೀತ್ ಪಾಟೀಲ್, ಮುರಳೀಧರ ಪಾಟೀಲ್, ಪ್ರಕಾಶ್ ಮರಗಾಳೆ, ವಿಲಾಸರಾವ್ ಬೆಳಗಾಂವಕರ, ಆರ್.ಎಂ.ಚೌಗುಲೆ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!