Uncategorized

ಮುನಿಸನ್ನ ಮರೆತು ಒಂದಾದ್ರಾ ರೆಡ್ಡಿ ಮತ್ತು ಶ್ರೀರಾಮುಲು

Share

ಗಣಿ ನಾಡಿದ ಜೋಡೆತ್ತುಗಳಾದ ರೆಡ್ಡಿ ಮತ್ತು ರಾಮುಲು ಮತ್ತೇ ಒಂದಾಗಿದ್ದಾರೆ. ಕೇವಲ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಮಾತ್ರವಲ್ಲ. ನೀತಿ ಹೇಳುವ ಮಂದಿ ಮೊದಲು ನಾವು ಒಂದಾಗಬೇಕು. ಯತ್ನಾಳ್, ಲಿಂಬಾವಳಿ, ರಮೇಶ್ ಜಾರಕಿಹೊಳಿ ಎಲ್ಲರೂ ಒಂದಾಗಬೇಕು. ನಾವೇ ಕೈಕಾಲು ಹಿಡಿದು ಯತ್ನಾಳರನ್ನು ಒಪ್ಪಿಸ್ತೀವಿ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಕೊಪ್ಪಳದಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಸಂಘಟನಾತ್ಮಕ ಸಭೆಯನ್ನು ಕರೆಯಲಾಗಿತ್ತು. ಈ ವೇಳೆ ಹೈಕಮಾಂಡ್ ಸಂಧಾನದ ಬಳಿಕ ಮುನಿಸನ್ನು ಮರೆತು ರೆಡ್ಡಿ ಮತ್ತು ರಾಮುಲು ಒಂದಾಗಿದ್ದಾರೆ. ಕೇವಲ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಮಾತ್ರವಲ್ಲ. ನೀತಿ ಹೇಳುವ ಮಂದಿ ಮೊದಲು ನಾವು ಒಂದಾಗಬೇಕು. ಯತ್ನಾಳ್, ಲಿಂಬಾವಳಿ, ರಮೇಶ್ ಜಾರಕಿಹೊಳಿ ಎಲ್ಲರೂ ಒಂದಾಗಬೇಕು. ನಾವೇ ಕೈಕಾಲು ಹಿಡಿದು ಯತ್ನಾಳರನ್ನು ಒಪ್ಪಿಸ್ತೀವಿ ಎಂದಿದ್ದಾರೆ. ಇನ್ನು ಸಿಎಂ ವಿರುದ್ಧ ವಾಗ್ಧಾಳಿ ನಡೆಸಿದ ಅವರು ಎಐಸಿಸಿ ಅಧ್ಯಕ್ಷರಾಗಲಿ ಅಥವಾ ಕೆಪಿಸಿಸಿ ಅಧ್ಯಕ್ಷರಾಗಲಿ ಯಾರೂ ಕೂಡ ಸಿದ್ಧರಾಮಯ್ಯನವರನ್ನು 2028 ರ ವರೆಗೆ ಸಿಎಂ ಆಗಿರುತ್ತಾರೆಂದು ಹೇಳಿಲ್ಲ. ಬಿಜೆಪಿಗರು ಆಪರೇಷನ್ ಕಮಲ ಮಾಡುತ್ತಾರೆಂದು ಹೇಳುತ್ತಾರೆ. ಆದರೇ, ಅವರಲ್ಲಿಯೇ ಎಲ್ಲವೂ ಸರಿಯಿಲ್ಲ. ಸಾಧನ ಸಮಾವೇಶದ ಮಧ್ಯದಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಎದ್ದು ಹೋಗಿದ್ದು, ಇದು ಅವರಿಬ್ಬರೂ ಆಗಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದರು

Tags:

error: Content is protected !!