Vijaypura

ಯುವಕನ ಗುಪ್ತಾಂಗ, ಕತ್ತು ಹಾಗೂ ಇತರೆ ಭಾಗಗಳಿಗೆ ಹೊಡೆದು ಯುವಕನ ಕೊಚ್ಚಿ ಕೊಲೆ

Share

ವಿಜಯಪುರ ಜಿಲ್ಲೆಯಲ್ಲಿ ಹಾಡು ಹಗಲೇ ಮತ್ತೊಂದು ಭೀಕರ ಕೊಲೆ ನಡೆದು ಹೋಗಿದೆ. ಬುಧವಾರ ವಿಜಯಪುರ ನಗರದಲ್ಲಿ ಒಂದು ಭೀಕರ ಕೊಲೆ ನಡೆದಿತ್ತು.. ಆ ಕೊಲೆ ನೆನಪು ಮಾಸುವ ಮುನ್ನವೇ ಮತ್ತೊಂದು ಕೊಲೆ ನಡೆದಿದೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಅರಕೇರಿ ಗ್ರಾಮದಲ್ಲಿ ಹಾಡು ಹಗಲೆ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಅರಕೇರಿ ಗ್ರಾಮದ ಬೀರಣ್ಣಾ ದುಂಡಪ್ಪ ವಡೇಯರ ಎಂಬವನ ಹತ್ಯೆ ಮಾಡಲಾಗಿದೆ.

ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags:

error: Content is protected !!