ಹುಕ್ಕೇರಿ ತಾಲೂಕಿನಲ್ಲಿ ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಮೊಹರಂ ಹಬ್ಬ ಆಚರಣೆ.
ಹುಕ್ಕೇರಿ ತಾಲೂಕಿನಲ್ಲಿ ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಮೋಹರಂ ಹಬ್ಬವನ್ನು ತಾರತಮ್ಯವಿಲ್ಲದೇ, ಸರ್ವಧರ್ಮೀಯರು ಪಾಲ್ಗೊಂಡು ಹಬ್ಬವನ್ನು ಆಚರಿಸಿದರು.
ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೊದಲ ತಿಂಗಳಾದ ಹಾಗೂ ಹೊಸ ಇಸ್ಲಾಮಿಕ್ ವರ್ಷದ ಆರಂಭವನ್ನು ಸೂಚಿಸುವ ಮೊಹರಂ ತಿಂಗಳಲ್ಲಿ ಆಚರಿಸುವ ಪವಿತ್ರ ಮೊಹರಂ ಹಬ್ಬವನ್ನು ದುಃಖದ ಹಬ್ಬ, ಕಣ್ಣೀರಿನ ಹಬ್ಬವಾಗಿ ಮುಸ್ಲಿಮರು ಆಚರಿಸುತ್ತಾರೆ. ಈ ತಿಂಗಳಲ್ಲಿ ಮುಸ್ಲಿಮರು ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಾರೆ. ಮೊಹರಂ ಹಿಂದೂ-ಮುಸ್ಲಿಂರು ಭಾವೈಕ್ಯತೆಯಿಂದ ಪಾಲ್ಗೊಂಡು ಹಬ್ಬವನ್ನು ಆಚರಿಸಿದರು. ಹತ್ತು ದಿನಗಳವರೆಗೆ ನಗರದ ವಿವಿಧ ಭಾಗಗಳಲ್ಲಿ ದೇವರುಗಳನ್ನು ಸ್ಥಾಪಿಸಿ ಮೊಹರಂ ಆಚರಣೆ ಮಾಡಲಾಯಿತು.
ಶನಿವಾರ ಕತ್ತಲ್ ರಾತ್ರಿ ದಿನ ಹಸೇನ್ ಹುಸೇನರ ತ್ಯಾಗ ಬಲಿದಾನದ ಅಂಗವಾಗಿ ಪಾಂಜಾಗಳು ಮತ್ತು ತಾಬೂತಗಳು ಒಬ್ಬರುಗೋಬ್ಬರು ಭೇಟಿ ನೀಡಿ ಮುಕಾಬಲ ಪಡೆದುಕೊಂಡವು.
ರವಿವಾರ ಮದ್ಯಾಹ್ನ ಚೋಂಗೆ, ಮಾದಿಲಿ ಮತ್ತು ಮಾಂಸದೂಟದ ನೈವೇದ್ಯ ದೊಂದಿಗೆ ದೇವರುಗಳು ನದಿಗೆ ಹೋಗುವ ಮೂಲಕ ಮೋಹರಂ ಹಬ್ಬ ಸಮಾಪ್ತಿ ಗೋಂಡಿತು.
Hukkeri
ಹುಕ್ಕೇರಿ ತಾಲೂಕಿನಲ್ಲಿ ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಮೊಹರಂ ಹಬ್ಬ ಆಚರಣೆ.
