BELAGAVI

ರಾಜ್ಯದ ಹಣ ಬಿಹಾರ್ ಚುನಾವಣೆಗೆ; ಅಭಿವೃದ್ಧಿ ಕುಂಠಿತ: ನಿವೃತ್ತ ಎಡಿಜಿಪಿ ಡಾ. ಭಾಸ್ಕರ್ ರಾವ್

Share

ಮುಖ್ಯಮಂತ್ರಿ ಸಿದ್ದರಾಮಯ್ಯ 44 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದಾರೆ.ಬೆಲೆ ಏರಿಕೆಯನ್ನೂ ಮಾಡಿದ್ದರಿಂದ ರಾಜ್ಯದಲ್ಲಿ ತೆರಿಗೆ ಹಣ ಸಾಕಷ್ಟು ಸಂಗ್ರವಾಗಿದೆ, ಆದಾಯವು ಹೆಚ್ಚಿದೆ, ಬಿಹಾರ್ ಚುನಾವಣೆ ಮತ್ತು ಎಐಸಿಸಿಗೆ ರಾಜ್ಯದ ಹಣ ಹರಿದು ಹೋಗುತ್ತಿರುವುದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ನಿವೃತ್ತ ಎಡಿಜಿಪಿ, ರಾಜ್ಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಡಾ. ಭಾಸ್ಕರರಾವ್ ಆರೋಪ ಮಾಡಿದರು

ಬುಧವಾರ ಬೆಳಗಾವಿಯಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ 44 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದು, ಗ್ಯಾರಂಟಿ ಯೋಜನೆಗೆ 55,000 ಕೋಟಿ ತೆಗೆದಿರಿಸಿದ್ದಾರೆ. ಅದನ್ನೂ ಸರಿಯಾಗಿ ಪೂರೈಕೆ ಮಾಡುತ್ತಿಲ್ಲ. ಸಾರ್ವಜನಿಕರ ತೆರಿಗೆ ಹಣದಲ್ಲಿ ಸಾಕಷ್ಟು ಆದಾಯ ಸಂಗ್ರವಾಗಿದೆ. ಈ ಹಿನ್ನೆಲೆಯಲ್ಲಿ ಗ್ಯಾರಂಟಿಯಿಂದ ಕುಂಠಿತ ಎನ್ನುವುದು ತಪ್ಪು,ತೆರಿಗೆ ಹಣ ಎಲ್ಲಿ ಹೋಯಿತು ಎಂದು ಅವರು ಪ್ರಶ್ನೆ ಮಾಡಿದರು. 33 ಪದಾರ್ಥಗಳ, ಸೇವೆಗಳ, ವಿದ್ಯುತ್, ಕೆ ಎಸ್ ಆರ್ ಟಿ ಸಿ, ಹಾಲು ಇತರೆ ಬೆಲೆ ಏರಿಕೆಯಾಗಿದೆ ಪೆಟ್ರೋಲ್ ಮೇಲೆ ತೆರಿಗೆ ಹೆಚ್ಚಳ ಮಾಡಿದ್ದಾರೆ ಆದಾಯ ಹೆಚ್ಚಳವಾಗಿದ್ದರೂ ಕನ್ನಡಿಗರಿಗೆ ಕೊಡುಗೆ ಇಲ್ಲದಂತಾಗಿದೆ.ಬಿಹಾರ್ ಸೇರಿದಂತೆ ಬೇರೆ ರಾಜ್ಯಗಳ ಚುನಾವಣೆಗೆ ಹಾಗೂ ಎಐಸಿಸಿಗೆ ಇಲ್ಲಿಯ ದುಡ್ಡು ಹರಿದು ಹೋಗುತ್ತಿದೆ. ಆದ್ದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ.

ಗ್ಯಾರಂಟಿ ಯೋಜನೆಗಳಿಂದ ದುಡ್ಡು ಪೋಲಾಗುತ್ತಿದೆ ಎಂದು ಹೇಳುವುದು ತಪ್ಪು, 44 ಲಕ್ಷ ಕೋಟಿ ಬಜೆಟ್ ಮಾಡಿದಾಗ ಬೆಲೆ ಜಾಸ್ತಿನೂ ಮಾಡಿದಾಗ ಆದಾಯ ಹೆಚ್ಚಾಗಿದೆ ಆದ್ದರಿಂದ ದುಡ್ಡು ಎಲ್ಲಿ ಹೋಗುತ್ತದೆ ಎಂಬ ಪ್ರಶ್ನೆ ಮೂಡುತ್ತದೆ. ವಾಲ್ಮೀಕಿ ಸೇರಿದಂತೆ ಅನೇಕ ಹಗರಣಗಳಾಗಿದ್ದು ಯಾರ ಮೇಲೂ ಕ್ರಮಗಳನ್ನು ತೆಗೆದುಕೊಂಡಿಲ್ಲ, ರಾಜ್ಯದಲ್ಲಿ ಅಭಿವೃದ್ಧಿ ಮತ್ತು ಆಡಳಿತ ಕುಂಠಿತವಾಗಿದೆ. ಮುಖ್ಯಮಂತ್ರಿಗಳು ಗೊಂದಲದಲ್ಲಿದ್ದು ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. ಆಡಳಿತದ ಮೇಲೆ ಹಿಡಿತ ಮತ್ತು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಕಾಲ್ತುಳಿತ ಪ್ರಕರಣದಲ್ಲಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದು ಉದ್ಘಾಟತನ. ಕುರ್ಚಿ ಬದಲಾವಣೆಯ ಭಯದಲ್ಲಿದ್ದಾರೆ.

ಬೆಂಗಳೂರಿನಲ್ಲಿಯೂ ಸಂಪೂರ್ಣ ವ್ಯವಸ್ಥೆ ಹದಿಗೆಟ್ಟಿದ್ದು ಮಳೆಗಾಲವನ್ನು ಸರಿಯಾಗಿ ನಿಭಾಯಿಸುವುದಕ್ಕೆ ಆಗಿಲ್ಲ, ಜಲಜೀವನ್ ಮಿಷನ್ ಅನುಷ್ಠಾನದಲ್ಲಿ ಎಡವಿದ್ದಾರೆ, ರಾಜ್ಯದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಬಸ್ ಗಳು ಕಡಿಮೆಯಾಗಿವೆ. ರೈತರು ಸೇರಿದಂತೆ ಯಾರಿಗೂ ನ್ಯಾಯ ದೊರೆಯುತ್ತಿಲ್ಲ. ಇದು ಅಭಿವೃದ್ಧಿ ಶೂನ್ಯ ಸರ್ಕಾರವಾಗಿದೆ ಎಂದರು

ಕಾನೂನು ಸುವ್ಯವಸ್ಥೆ ಬಗ್ಗೆ ಪ್ರತಿಕ್ರಿಯಿಸಿದ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ಸಂಪೂರ್ಣವಾಗಿ ಹದಗೆಟ್ಟಿದೆ ಸಚಿವ ಪರಮೇಶ್ವರ ಇಲಾಖೆ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ. ಯಾವುದೇ ರೀತಿಯ ನಾಯಕತ್ವ ನಿಭಾಯಿಸುವುದಕ್ಕೆ ಆಗುತ್ತಿಲ್ಲ. ಪೊಲೀಸರೆಂದರೆ ಭಯ ಮತ್ತು ಗೌರವವಿಲ್ಲದಂತಾಗಿದೆ. ವರ್ಗಾವಣೆಗಳಿಂದಲೂ ಪೊಲೀಸರಿಗೆ ಬೇಸರ ತರಿಸಿದೆ
ಎಂದು ಹೇಳಿದರು

Tags:

error: Content is protected !!