hubbali

ಕಾಂಗ್ರೆಸ್ ನಲ್ಲಿ 140 ಶಾಸಕರು ಇರುವುದರಿಂದ ಅಸಮಾಧಾನ ಸಹಜ : ಸಚಿವ ಸಂತೋಷ್ ಲಾಡ್

Share

ಹುಬ್ಬಳ್ಳಿ: ಕಾಂಗ್ರೆಸ್ ನಲ್ಲಿ 140 ಶಾಸಕರು ಇರುವುದರಿಂದ ಅಸಮಾಧಾನ ಸಹಜ‌ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,ನಮ್ಮದು 140 ಶಾಸಕರು ಇರೋ ಪಕ್ಷ ಆಗಿದ್ದು ಹೀಗಾಗಿ ಅಸಮಾಧಾನ ಸಹಜ ಅವರ ಅಸಮಾಧಾನ ಪಕ್ಷದ ವಿರುದ್ಧ ಅಲ್ಲಾ ಎಐಸಿಸಿ ವರಿಷ್ಠಸುರ್ಜೇವಾಲಾ ಅವರು ಶಾಸಕರ ಜೊತೆ ಮಾತನಾಡುತ್ತಿದ್ದಾರೆ. ಅವರ ಅಸಮಾಧಾನ ಬಗೆಹರಿಸೋ ಕೆಲಸ ಮಾಡುತ್ತಿದ್ದಾರೆ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುತ್ತಾರೆ ಎಂದರು.

ಇನ್ನು ಮಲ್ಲಿಕಾರ್ಜುನ ಖರ್ಗೆ ದುರ್ಬಲ ಅಧ್ಯಕ್ಷ ಎಂಬ ಹೇಳಿಕೆ ಕಿಡಿ ಕಾರಿದ ಅವರುವಿಶ್ವಗುರು ಪವರ್ ಫುಲ್ ಅಂತ ಬರೀ ಹೇಳಿಕೊಂಡು ಅಡ್ಡಾಡಿದ್ರೆ ಸಾಲದು ಪೆಹಲ್ಗಾಂ ಘಟನೆ ನಡೆದಾಗ ನಾಲ್ಕೈದು ಜನ ಉಗ್ರರ ಫೋಟೋ ತೋರಿಸಿದರುಉಗ್ರಗಾಮಿಗಳು ಕಥೆ ಏನಾಯ್ತು..? ಪಹಾಲ್ಗಮ್ ಘಟನೆ ಬಗ್ಗೆ ಕೇಳಬಾರದಾ..? ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್ ಕುರಿತು ಹೇಳಿರೋ ಅರ್ಥ ಬೇರೆ ಇದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೂ ಪಕ್ಷದ ಕುರಿತು ಮಾಹಿತಿ ಕೊಡಬೇಕಾಗುತ್ತೆ ಹೈಕಮಾಂಡ್ ಅಂತ ಹೇಳಿರೋದು ಗೌರವ ಪೂರಕವಾಗಿ. ಅದನ್ನೇ ಇವರು ದೊಡ್ಡ ಮಟ್ಟದಲ್ಲಿ ಚರ್ಚಿಸ್ತಿದ್ದಾರೆ ಸಮಸ್ಯೆಗಳ ಬಗ್ಗೆ ಮೊದಲು ಚರ್ಚೆ ಮಾಡಬೇಕು ಚೈನಾಗೆ ಇಂಡಿಯಾಗೆ ಹೋಲಿಸಿಕೊಂಡು ಮಾತಾಡೋಣ್ವಾ.?.ಚೈನಾ ವಸ್ತುಗಳನ್ನು ಬಳಸಬೇಡಿ ಅಂತ ಮೋದಿ ಹೇಳ್ತಾರೆ ಆದ್ರೆ ಅಲ್ಲಿನ ವಸ್ತುಗಳನ್ನು ಇಂಪೋರ್ಟ್ ಮಾಡ್ತಿರೋದು ಯಾರು..? ದೇಶದ ವಿಚಾರದಲ್ಲಿ ಪ್ರಶ್ನೆ ಕೇಳೋ ಅಧಿಕಾರವಿದೆ, ಕೇಳ್ತೇವೆ. ಬಿಜೆಪಿಯ ವಿದೇಶಾಂಗ ನೀತಿ ಫೇಲ್ ಆಗಿದೆ ವೈಯಕ್ತಿಕ ತಲಾ ಆದಾಯ ಬಗ್ಗೆ ಬಿಜೆಪಿಯವರು ಮಾತಡಲ್ಲಾ.? ಭ್ರಷ್ಟಾಚಾರ ಕಾಂಗ್ರೆಸ್ ಡಿ ಎನ್ಎ ದಲ್ಲಿದೆ ಎಂಬ ಜೋಶಿ ಹೇಳಿಕೆಗೆ ತಿರುಗೇಟು ನೀಡಿದರು‌.

ಯುಪಿಎ ಅವಧಿಯಲ್ಲಿ ಕಲ್ಲಿದ್ದಲು ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿಲ್ಲಾ.ಹೀಗಂತ ಬಿಜೆಪಿ ಸರ್ಕಾರವೇ ಹೇಳಿದೆ. ಯುಪಿಎ ಸರ್ಕಾರದಲ್ಲಿ ಯಾವುದೇ ಸ್ಕ್ಯಾಮ್ ಆಗಿಲ್ಲಾ ಅಂತ ಇದೇ ಬಿಜೆಪಿ ಸರ್ಕಾರ ರಿಪೋರ್ಟ್ ಹೇಳಿದೆ. ಇವರ 11 ವರ್ಷದ ಅವಧಿಯಲ್ಲಿ ಯಾರಿಗೆಲ್ಲಾ ಕಲ್ಲಿದ್ದಲು ಟೆಂಡರ್ ಕೊಟ್ಟಿದ್ದಾರೆ ಅಂತ ಬಿಜೆಪಿ ಹೇಳಲಿ ವೈಯಕ್ತಿಕವಾಗಿ ಮೋದಿ ಅವರನ್ನೂ ನಾವು ಬೈದಿಲ್ಲ, ಹಗುರವಾಗಿ ಮಾತನಾಡಿಲ್ಲ.

ಸಿಎಂ ಬದಲಾವಣೆ ಕುರಿತು ಕೆಲ ಶಾಸಕರ ಹೇಳಿಕೆ ವಿಚಾರ

ಪ್ರಧಾನಿ ಬದಲಾವಣೆ ಮಾಡಬೇಕು ಅಂತ ಬಿಜೆಪಿಯವರು ಕೇಳ್ತಿದ್ದಾರೆ ಅಂತ ನನಗೆ ಮಾಹಿತಿ ಇದೆ
ಅದರ ಬಗ್ಗೆ ಬಿಜೆಪಿ ಅವರು ಚರ್ಚೆ ಮಾಡಲಿಪೆಟ್ರೋಲ್ ಡೀಸೆಲ್, ಸಿನಿಮಾ ಟಿಕೆಟ್ ಮೇಲೆ ಸೆಸ್ ಹಾಕೋ ವಿಚಾರವಾಗಿ ಸಹ ಪ್ರತಿಕ್ರಿಯೆ ನೀಡಿದ ಅವರುಸೆಸ್ ಹಾಕುವಂತೆ ಸರ್ಕಾರಕ್ಕೆ ಕೇಳಿದ್ದೇವೆಸ್ಲಲ್ಪ ಹಾಕೋದರಿಂದ ಜನರಿಗೆ ಹೆಚ್ಚಿನ ಹೊರೆ ಆಗಲ್ಲಾ ಎಂದರು.

ಕೇಂದ್ರ ಸರ್ಕಾರ ಮೊದಲು ನರೇಗಾ ಹಣ ಬಿಡುಗಡೆ ಮಾಡಲಿ

ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಗ್ರಹ ಮಾಡಿದರು.ರಾಜ್ಯ ಸರ್ಕಾರ ಮಹಾನಗರ ಪಾಲಿಕೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರುಕೇಂದ್ರದವರು ಮೊದಲು ನರೇಗಾ ಬಿಲ್ ಬಿಡುಗಡೆ ಮಾಡಲಿ ಕೇಂದ್ರ ಸರ್ಕಾರ ನೂರು ಕಡೆ ಸ್ಮಾರ್ಟ್ ಸಿಟಿ ಯೋಜನೆ ಮಾಡಿತು
ಎಷ್ಟು ಸಿಟಿ ಸ್ಮಾರ್ಟ್ ಆಗಿವೆ..? ಹುಬ್ಬಳ್ಳಿಯೂ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಯ್ಕೆಯಾಗಿತ್ತು ಆದರೆ ಇಲ್ಲಿನ ಡ್ರೈನೇಜ್ ಸ್ಥಿತಿ ಏನಾಗಿದೆ.?300 ಕೋಟಿ ಹೆಚ್ಚುವಾರಿಯಾಗಿ ಕೆಲಸ ಮಾಡಿದ್ದಾರೆ

ರಾಜ್ಯದಲ್ಲಿ ಇದೇ ರೀತಿಹಣವಿಲ್ಲದೆಯೇ 2 ಲಕ್ಷ ರೂಪಾಯಿ ಟೆಂಡರ್ ಕರೆದು ಹೋಗಿದ್ದಾರೆ ಅವಳಿ ನಗರದಲ್ಲಿ 300 ಕೋಟಿ ಟೆಂಡರ್ ಹೇಗೆ ಕರೆದರು..?
ಈ ಪ್ರಶ್ನೆ ಬಿಜೆಪಿ ಅವರನ್ನೇ ಕೇಳಿ ಎಂದರು.

Tags:

error: Content is protected !!