ಕಾಗವಾಡ ಪಟ್ಟಣದಿಂದ ಮಹಾರಾಷ್ಟçದ ಗಡಿ ವರೆಗಿನ ರಸ್ತೆ ಅಭಿವೃದ್ಧಿಗೆ ಸುಮಾರು 5 ಕೋಟಿ ಅನುದಾನದ ಕಾಮಗಾರಿಗೆ ಶಾಸಕ ರಾಜು ಕಾಗೆ ಭೂಮಿ ಪೂಜೆ ನೆರವೇರಿಸಿದರು.
ಗುರುವಾರ ದಿ. 03 ರಂದು ಪಟ್ಟಣದ ಚೆನ್ನಮ್ಮಾ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆಯ ಎಸ್‌ಎಚ್-53 ಯೋಜನೆಯಡಿಯಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಅವರು, ಕಳೆದ ಅನೇಕ ವರ್ಷಗಳಿಂದ ಈ ರಸ್ತೆಯ ಅಭಿವೃದ್ಧಿಗಾಗಿ ಸಾರ್ವಜನಿಕರ ಬೇಡಿಕೆಯಾಗಿತ್ತು. ಇದನ್ನು ಗಮನದಲ್ಲಿಟ್ಟು, 5 ಕೋಟಿ ಅನುದಾನ ಮಂಜೂರುಗೊಳಿಸಿದ್ದು, ಗುತ್ತಿಗೆದಾರರು ಅವಧಿಯ ವಳಗೆ ಗುಣಮಟ್ಟದ ಕಾಮಗಾರಿ ಮಾಡಬೇಕೆಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಈ ವೇಳೆ ಲೋಕೋಪಯೋಗಿ ಇಲಾಖೆಯ ಅಭಿಯಂತರ ಜಯಾನಂದ ಹಿರೇಮಠ, ಎಂ.ಎಸ್. ಮಗದುಮ್ಮ, ಶಿವಪ್ರಸಾದ ಸಜ್ಜನ, ಮುಖಂಡರಾದ ಜ್ಯೋತಿಕುಮಾರ ಪಾಟೀಲ, ಸೌರಭ ಪಾಟೀಲ, ರಮೇಶ ಚೌಗುಲೆ, ಕಾಕಾ ಪಾಟೀಲ, ವಿದ್ಯಾಧರ ಧೊಂಡಾರೆ, ಅಣ್ಣಾಸಾಹೇಬ ಭೋಸಗೆ, ಶಾಂತಿನಾಥ ಕರವ, ಕುಮಾರ ಖೋತ, ಚಿದಾನಂದ ಅವಟಿ, ಪದ್ಮಾಕರ ಕರವ, ಪವನ ಪಾಟೀಲ, ಗುತ್ತಿಗೆದಾರರಾದ ಬಸವರಾಜ ಮಗದುಮ್ಮ, ತಿಪ್ಪಣ್ಣ ಬಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸುಕುಮಾರ ಬನ್ನೂರೆ.
ಇನ ನ್ಯೂಸ್ ಕಾಗವಾಡ