hubbali

ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗ

Share

ಧರ್ಮಸ್ಥಳ ಪ್ರಕರಣವನ್ನು ಸರ್ಕಾರ SITಗೆ ನೀಡಿದೆ ಮತ್ತು ಈ ಬಗ್ಗೆ ಆತುರದಿಂದ ಮಾತನಾಡುವುದು ಸರಿಯಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದರು

ಮಂಗಳವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ನಾವು ಏನೇ ಮಾಡಿದರೂ ಟೀಕಿಸುತ್ತಾರೆ. ಮೋದಿ ಅವಧಿ ಮುಗಿಯುವವರೆಗೆ ಯಾರೂ ಏನನ್ನೂ ಹೇಳುವುದಿಲ್ಲ ಎಂದು ಅವರು ಭಾವಿಸುತ್ತಾರೆ” ಸುಪ್ರೀಂ ಕೋರ್ಟ್ ಇ.ಡಿ ಬಗ್ಗೆ ಹಲವು ಬಾರಿ ಕಾಮೆಂಟ್ ಮಾಡಿದೆ ಮತ್ತು ಸುಪ್ರೀಂ ಕೋರ್ಟ್ ಕೂಡ ಇ.ಡಿಯನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ ಎಂದು ಹೇಳಿದೆ ಬಿಜೆಪಿಯವರು ದೇಶದಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ನಟಿಸುತ್ತಿದ್ದಾರೆ ದೇಶದ ಪ್ರಧಾನಿ ಇನ್ನೂ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿಲ್ಲ.

ಅವರು ಪಹಲ್ಗಾಮ್‌ಗೆ ಹೋಗಿದ್ದರು, ನಂತರ ಎಂಟು ವಿದೇಶ ಪ್ರವಾಸಗಳಿಗೆ ಹೋಗಿ ಬಂದರು ಮತ್ತು ಈಗ ಬಿಹಾರ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ ಎಂದರು ಮಹದಾಯಿ ನೀರು ಹಂಚಿಕೆ ವಿಷಯದ ಕುರಿತು ಮಾತನಾಡಿದ ಸಚಿವ ಸಂತೋಷ್ ಲಾಡ್, ಗೋವಾ ಅಗತ್ಯವಿದ್ದಾಗ ಪರಿಸರ ಅನುಮತಿ ಪಡೆಯುತ್ತದೆ, ಆದರೆ ಕರ್ನಾಟಕ ಅಗತ್ಯವಿದ್ದಾಗ ಅದನ್ನು ಪಡೆಯುವುದಿಲ್ಲ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಯಾರೂ ಈ ವಿಷಯದ ಬಗ್ಗೆ ಮಾತನಾಡದಿರುವುದು ಆಶ್ಚರ್ಯ ತಂದಿದೆ ಎಂದರು

Tags:

error: Content is protected !!