ಕೇಂದ್ರ ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕಳುವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿ ಒಟ್ಟು 9 ಲಕ್ಷ 31 ಸಾವಿರ ರೂಪಾಯಿ ಮೌಲ್ಯದ 95 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
2025ರ ಜುಲೈ 18 ರಂದು ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಜನದಟ್ಟಣೆಯ ಸಮಯದಲ್ಲಿ ಪ್ರಯಾಣಿಕರು ಬಸ್‌ನಿಂದ ಇಳಿಯುವ ವೇಳೆ ಕೆಲವರು ಬಂಗಾರದ ಆಭರಣಗಳನ್ನು ಕಳವು ಮಾಡಿದ ಘಟನೆ ನಡೆದಿತ್ತು. ಈ ಸಂಬಂಧ ಬೆಳಗಾವಿಯ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಪುಂಡಲೀಕ ಭೀಮಪ್ಪ ಲೆಂಕನ್ನವರ ದೂರು ಸಲ್ಲಿಸಿದ್ದರು. ಪೊಲೀಸ್ ಆಯುಕ್ತರು, ಉಪ ಆಯುಕ್ತರು ಮಾರ್ಗದರ್ಶನದಲ್ಲಿ ಮಾರ್ಕೆಟ್ ಸಹಾಯಕ ಪೊಲೀಸ್ ಆಯುಕ್ತರಾದ ಸದಾಶಿವ ಕಟ್ಟಮನಿ, ಪಿಐ ಮಹಾಂತೇಶ ಧಾಮಣ್ಣವರ ರವರ ನೇತೃತ್ವದಲ್ಲಿ, ಪಿಎಸ್‌ಐ ಹೆಚ್.ಎಲ್. ಕೆರೂರ ಮತ್ತು ಅಪರಾಧ ವಿಭಾಗದ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿ, ಮಹಾರಾಷ್ಟ್ರ ಮೂಲದ ಪ್ರಕಾಶ್ ವಿಜಯ ಜಾಧವ ಮತ್ತು ಕಾಳಿದಾಸ ದಿಲೀಪ್ ಬರಡೆ ಅವರನ್ನು ಬಂಧಿಸಿ, ಒಟ್ಟು 95 ಗ್ರಾಂ ಬಂಗಾರದ ಆಭರಣಗಳು, ಅಂದಾಜು ಮೌಲ್ಯ ₹9,31,000/- ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸಿಬ್ಬಂದಿಗಳಾದ ಎಸ್.ಆ ಕುಗಟೋಳ್ಳಿ, ಸುರೇಶ ಎಂ ಕಾಂಬಳೆ, ಎಲ್.ಎಸ್. ಕಡೋಲ್ಕರ್, ಆಸೀಫ್ ಜಮಾದಾರ, ಕಾರ್ತಿಕ್ ಜಿ.ಎಮ್., ಎಮ್.ಬಿ. ಒಡೆಯರ
ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ರಮೇಶ ಅಕ್ಕಿ, ಮಹಾದೇವ ಕಾಶೀದ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಇವರ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.