BELAGAVI

ಶ್ರೀ ವಿಠ್ಠಲ-ರುಕ್ಮಿಣಿ ದೇವಾಲಯದಲ್ಲಿ ಮಹಾಪ್ರಸಾದ ಕಾರ್ಯಕ್ರಮ

Share

ಪ್ರತಿ ವರ್ಷದಂತೆ ಈ ವರ್ಷವೂ ಆಷಾಢಿ ಏಕಾದಶಿ ಪ್ರಯುಕ್ತ ರಾಜಹಂಸಗಢ ಗ್ರಾಮದಲ್ಲಿ ವಿಠ್ಠಲ-ರುಕ್ಮಿಣಿ ದೇವಾಲಯದಲ್ಲಿ ಭಕ್ತಿಭಾವಪೂರ್ಣವಾಗಿ ಮೊಹಮತ್ತೆ ಹಾಗೂ ಮಹಾಪ್ರಸಾದ ಕಾರ್ಯಕ್ರಮ ನೆರವೇರಿತು.
ಪಂಢರಪುರಕ್ಕೆ ದಿಂಡಿಯಲ್ಲಿ ತೆರಳಿದ್ದ ಭಕ್ತರು ಹಿಂತಿರುಗಿದ ನಂತರ, ದೇವಾಲಯದಲ್ಲಿ ಪೂಜೆ, ಅರ್ಚನೆ ಹಾಗೂ ಭಜನೆ ಕಾರ್ಯಕ್ರಮಗಳು ನೆರವೇರಿದರು. ಸಂಜೆ 6 ಗಂಟೆಗೆ ಮಹಾ ಆರತಿಯಿಂದ ನಂತರ ಗ್ರಾಮದ ಎಲ್ಲ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು, ದೇವಾಲಯದಲ್ಲಿ ನಿತ್ಯ ಸೇವೆ ಮಾಡುತ್ತಿರುವ ಗೌರವಾನ್ವಿತ ಸೇವಕರಾದ ಸುಭದ್ರಾ ಮಲ್ಲಪ್ಪ ಕುಂಡೇಕರ್, ಹ.ಭ.ಪ. ಶ್ರೀ ಸಿದ್ಧಪ್ಪ ದೇವಪ್ಪ ಹಾವಳ, ಹ.ಭ.ಪ. ಶ್ರೀ ತುಕಾರಾಮ ಸಿದ್ಧಪ್ಪ ಪುಂಜಕರ ಅವರನ್ನು ಗೌರವಿಸಲಾಯಿತು. ಜಿವಪ್ಪ ಪವಾರ, ದತ್ತಾ ಪವಾರ, ಹ.ಭ.ಪ. ಸಿದ್ಧಪ್ಪ ಛತ್ರೆ ಶಂಕರ ಹಾಲಗೇಕರ, ಭಾವಕಣ್ಣ ಕಂಬರಕರ, ಮಾರುತಿ ತಾವಶೆ, ಲಕ್ಷ್ಮಣ ಚವ್ಹಾಣ, ಪಿಂಟು ಕುಂಡೇಕರ್, ಸಿದ್ಧಪ್ಪ ಬಿರ್ಜೆ, ಶೇಖರ್ ಹಿರೇಮಠ ಇನ್ನಿತರರು ಶ್ರಮವಹಿಸಿದರು.

Tags:

error: Content is protected !!