ಎಂಇಎಸ್ ಮುಖಂಡರ ಮಾತು ಕೇಳಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ವಿರೋಧಿ ಚಟುವಟಿಕೆ ಕನ್ನಡಕ್ಕೆ ಅವಮಾನಿಸುವ ಯಾವುದೇ ಚಟುಚಟಿಕೆಗಳು ಪಾಲಿಕೆಯಲ್ಲಿ ನಡೆದರೆ ಕರವೇ ಕಾರ್ಯಕರ್ತರು ಪಾಲಿಕೆಗೆ ಮುತ್ತಿಗೆ ಹಾಕಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ
ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮೇಯರ ಮಂಗೇಶ ಪವಾರ ಹಾಗೂ ಉಪಮೇಯರ ವಾಣಿ ಜೋಶಿ ಅವರನ್ನು ಭೇಟಿಯಾಗಿ ಬೆಳಗಾವಿ ಮಹಾನಗರದಲ್ಲಿ ಸರ್ಕಾರದ ಆದೇಶದ ಪ್ರಕಾರ ಕನ್ನಡವನ್ನು ಕಡ್ಡಾಯಗೊಳಸುವ ಎಲ್ಲ. ಕ್ಷೇತ್ರಗಳಲ್ಲಿ ಕನ್ನಡದ ಅನುಷ್ಠಾನ ಮಾಡುವ ಕಾರ್ಯ ನಡೆದಿದೆ ಮಹಾರಾಷ್ಟ್ರ ಏಕೀಕರಣ ಸಮೀತಿಯ ಮುಖಂಡರ ತಮ್ಮನ್ನು ಭೇಟಿಯಾಗಿ ಕನ್ನಡದ ಫಲಕಗಳನ್ನು ತೆರವು ಮಾಡುವಂತೆ ಫುಂಡಾಟಿಕೆ ನಡೆಸಿದ್ದು, ಯಾವುದೇ ಕಾರಣಕ್ಕೂ ತಾವು ಎಂಈಎಸ್ ಮುಖಂಡರಪುಂಡಾಟಿಕೆಗೆ ಹೆದರದೇ ಬೆಳಗಾವಿ ಪಾಲಿಕೆಯಲ್ಲಿ ಕನ್ನಡ ಕಡ್ಡಾಯವನ್ನು ಮುಂದುವರೆಸಬೇಕು ಎಂದರು
ಕರವೇ ರಾಜ್ಯ ಸಂಚಾಲಕ ರಾಜು ನಾಶಿಪುಡಿ ಮಾತನಾಡಿ, ಮಹಾರಾಷ್ಟ್ರ ಏಕೀಕರಣ ಸಮೀತಿಯ ಮುಂಡರು ತಮ್ಮನ್ನು ಭೇಟಿಯಾಗಿ ಕನ್ನಡದ ಫಲಕಗಳನ್ನು ತೆರವು ಮಾಡುವಂತೆ ಮುಂಡಾಟಿಕೆ ನಡೆಸಿದ್ದು, ಯಾವುದೇ ಕಾರಣಕ್ಕೂ ತಾವು ಎಂಈಎಸ್ ಮುಖಂಡರ ಪುಂಡಾಟಿಕೆಗೆ ಹೆದರದೇ ಕನ್ನಡ ಕಡ್ಡಾಯಗೊಳಿಸಬೇಕು ಮಹಾನಗರ ಪಾಲಿಕೆಯಲ್ಲಿ ಕನ್ನಡ ವಿರೋಧಿ ಚಟುವಟಿಕೆ ನಡೆದರೆ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವದು ಎಚ್ಚರಿಸಿದರು
ಮೇಯರ ಮಂಗೇಶ ಪವಾರ ಮಾತನಾಡಿ, ಕೆಲವೊಂದು ಖಾಸಗಿಯವರು ಜಾಹೀರಾತುಗಳನ್ನು ಅಂಟಿಸುತ್ತಾರೆ ಈ ಸಂಬಂಧ ಆಯುಕ್ತರೊಂದಿಗೆ ಮಾತನಾಡುವುದಾಗಿ ಹೇಳಿದರು ಸುರೇಶ ಗವಣ್ಣವರ, ಗಣೇಶ ರೊಕಡೆ, ಮಂಜುನಾಥ ರಾಠೋಡ, ರಮೇಶ ಯರಗಣ್ಣವರ, ವಿನಾಯಕ ಭೋವಿ, ಲೋಕೇಶ ರಾಠೋಡ ಸೇರಿದಂತೆ ಕರವೇ ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು