ಚಂದಗಡ ತಾಲ್ಲೂಕಿನ ಸುಂಡಿ ಗ್ರಾಮದ ಬಳಿ ಪ್ರಕೃತಿದತ್ತವಾದ ವಝರ್ ಜಲಪಾತಕ್ಕೆ ಜೀವಕಳೆ ಬಂದಿದ್ದು, ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತ್ತಿದೆ. ಭಾರಿ ಮಳೆಯಿಂದ ಚಂದಗಡ ತಾಲ್ಲೂಕಿನ ಸುಂಡಿ ಗ್ರಾಮದ ಬಳಿ ಪ್ರಕೃತಿದತ್ತವಾದ ವಝರ್ ಜಲಪಾತಕ್ಕೆ ಜೀವಕಳೆ ಬಂದಿದ್ದು, ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತ್ತಿದೆ. ಈ ಜಲಪಾತವನ್ನು ಕಾಣಲು ವಿಶೇಷವಾಗಿ ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.ಈ ಜಲಪಾತ ಯುವಕ-ಯುವತಿಗಳಲ್ಲಿ ಹೆಚ್ಚು ಜನಪ್ರಿಯವಾಗಿದ್ದು, ಜಲಪಾತದಲ್ಲಿ ನೆನೆದು ಆನಂದಿಸೋದು ಮತ್ತು ಹಸಿರು ಹೊಲಗಳ ನಡುವೆ ಸೆಲ್ಫಿ ಕ್ಲಿಕ್ಕಿಸೋದು ಇವರನ್ನು ಆಕರ್ಷಿಸುತ್ತಿದೆ.

ಈ ವರ್ಷ ಜೂನ್ ತಿಂಗಳು ಸಂಪೂರ್ಣವಾಗಿ ಬಿಸಿಲಿನಿಂದ ಕಂಗೆಟ್ಟಿದ್ದನ್ನು ಮರೆಯಲಾಗದು. ಆದರೆ ಜುಲೈ ತಿಂಗಳ ಮಧ್ಯದಿಂದ ಮಳೆ ಆರಂಭವಾಗಿ ಎಲ್ಲಾ ನದೀ-ನಾಲೆಗಳು ಹಾಗೂ ಸಣ್ಣ ಜಲಪಾತಗಳು ಪ್ರವಾಹಿತವಾಗಿವೆ.
ಬೆಳಗಾವಿಯಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಈ ಸುಂದರ ಜಲಪಾತ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಸುಮಾರು 30 ರಿಂದ 40 ಅಡಿ ಎತ್ತರದಿಂದ ಜಲಧಾರೆಯಾಗಿ ಹರಿಯುತ್ತಿದ್ದು, ನೋಡಲು ಅತ್ಯಂತ ರಮಣೀಯವಾಗಿದೆ.
