ಕಳೆದ ಗುರುವಾರ ಹಾಡುಹಗಲೇ ಧಾರವಾಡದಲ್ಲಿ ಸಾಲ ನೀಡಿದವನು ಸಾಲ ಪಡೆದುಕೊಂಡ ತಮ್ಮನಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಕು ಇರಿತಕ್ಕೆ ಒಳಗಾದ ಯುವಕ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾನೆ.
ಹೌದು ಧಾರವಾಡದ ಹಾವೇರಿಪೇಟೆ ಕಂಠಿಗಲ್ಲಿಯ ನಿವಾಸಿ ರಾಘವೇಂದ್ರ ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಆದರೆ ಇಂದು ಚಿಕಿತ್ಸೆ ಫಲಿಸದೆ ಸಾವನಪ್ಪಿದ್ದಾನೆ. ಇನ್ನೂ ಖ್ವಾಜಾ ಶಿರಹಟ್ಟಿ ಆರೋಪಿ ರಾಘವೇಂದ್ರ ಅಣ್ಣನಿಗೆ ಹಣ ನೀಡಿದಾ, ಈ ಹಣ ಕೇಳಲು ಆರೋಪಿ ಖ್ವಾಜಾ ರಾಘವೇಂದ್ರ ಮನೆ ಬಳಿ ತೆರಳಿದ ವೇಳೆ ಗಲಾಟೆ ಆರಂಭವಾಗಿ ಚಾಕು ಇರಿಯುವುದರ ಮೂಲಕ ಅಂತ್ಯವಾಗಿತ್ತು. ಬಳಿಕ ರಾಘವೇಂದ್ರನನ್ನು ಕೂಡಲೇ ಸಂಬಂಧಿಗಳು ಆಸ್ಪತ್ರೆಗೆ ಸೇರಿಸಿದರು. ಚಾಕು ಎರಡು ತುಂಡಾಗುವ ಮಟ್ಟಕ್ಕೆ ಬಲವಾಗಿ ಇರಿದಿದ್ದರಿಂದ ಚಿಕಿತ್ಸೆ ಫಲಿಸದೆ ಅಣ್ಣನ ಸಾಲಕ್ಕೆ ತಮ್ಮ ಬಲಿಯಾಗಿದ್ದಾನೆ. ಜತೆಗೆ ಚಾಕು ಇರಿದ ಆರೋಪಿ ಖ್ವಾಜನನ್ನು ಉಪನಗರ ಠಾಣೆಯ ಪೊಲೀಸರು ಇಪ್ಪತ್ತನಾಲ್ಕು ಗಂಟೆಯಲ್ಲಿ ಕಾಲಿಗೆ ಗುಂಡೇಟು ನೀಡಿ ಬಂಧಿಸಿದ್ದು, ಆದರೆ ರಾಘವೇಂದ್ರ ಅಣ್ಣ ಮಹಾಂತೇಶನ ಸಾಲಕ್ಕೆ ತಮ್ಮ ರಾಘವೇಂದ್ರ ಬಲಿಯಾಗಿರುವುದು ದುರಂತ.