Dharwad

KIADB ಬಹುಕೋಟಿ ಹಗರಣ, ಧಾರವಾಡದ ಚಿಕ್ಕಮಲಿಗವಾಡ ರವಿ ಇಡಿ ವಶಕ್ಕೆ….ಜನಜಾಗೃತಿ ಸಂಘದ ಮುಖಂಡ ಬಸವರಾಜ್ ಕೊರವರಿಂದ ಹಗರಣ ಬಯಲಿಗೆ

Share

ಧಾರವಾಡ KIADBಯಲ್ಲಿ ನಡೆದಿದ್ದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆರೋಪದ ಮೇಲೆ ಇಡಿ ಅಧಿಕಾರಿಗಳು ಧಾರವಾಡ ತಾಲೂಕಿನ ಚಿಕ್ಕಮಲಿಗವಾಡ ಗ್ರಾಮದ ಓರ್ವನನ್ನು ಬಂಧನ ಮಾಡಿದ್ದಾರೆ.

ಕೆಐಎಡಿಬಿ ಬಹುಕೋಟಿ ಹಗರಣದಲ್ಲಿ ಇಡಿ ಅಧಿಕಾರಿಗಳು ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ರವಿ ಕುರಬೆಟ್ಟ ಎಂಬಾತನನ್ನ ವಶಕ್ಕೆ ಪಡೆದು, ಬಂಧನ ಮಾಡಿದೆ. ಕೆಐಎಡಿಬಿಯಲ್ಲಿ ರೈತರ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡಲಾಗಿದ್ದು, ಈ ಕುರಿತು ಜನಜಾಗೃತಿ ಸಂಘದ ಬಸವರಾಜ ಕೊರವರ ತೀವ್ರ ಹೋರಾಟ ಮಾಡಿದ್ದರು. ಹಾಗಾಗಿಯೇ, ಕಳೆದ ಒಂದು ವರ್ಷದ ಹಿಂದೆ ಹಲವರ ಬಂಧನವಾಗಿತ್ತು.

ಈಗ ಇಡಿ ವಶಕ್ಕೆ ಪಡೆದುಕೊಂಡಿರುವ ರವಿ ಕುರಬೆಟ್ಟ ಹಲವು ಕೋಟಿ ರೂಪಾಯಿಯ ಅವ್ಯವಹಾರದಲ್ಲಿ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ, ವಿಚಾರಣೆಗೆ ತೆರಳಿದ್ದ ರವಿ ಎಂಬಾತನನ್ನ ವಶಕ್ಕೆ ಪಡೆದು, ನಂತರ ಬಂಧನ ಮಾಡಿದೆ. ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಎರಡೇರಡು ಬಾರಿ ಬಿಲ್ ತೆಗೆದಿರುವ ಬಹುಕೋಟಿ ಹಗರಣ ಇದ್ದಾಗಿದ್ದು, ಈಗ ಮತ್ತಷ್ಟು ಜನಕ್ಕೆ ಬಂಧನ ಭೀತಿಯಿಂದ ಎದೆಯಲ್ಲಿ ಡವ್ ಡವ್ ಶುರುವಾಗಿದೆ.

 

Tags:

error: Content is protected !!