ಖಾನಾಪೂರ-ಪಾರಿಶ್ವಾಡ ರಸ್ತೆಯಲ್ಲಿ ಉಂಟಾದ ಬೃಹತ್ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಖಾನಾಪೂರ ಬಿಜೆಪಿ ಯುವಾ ಮೋರ್ಚಾದ ವತಿಯಿಂದ ಮಾಡಲಾಯಿತು.
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಪಾರಿಶ್ವಾಡ ರಸ್ತೆಯಲ್ಲಿ ಬೃಹತ್ ಗುಂಡಿಗಳು ನಿರ್ಮಾಣಗೊಂಡಿದ್ದು, ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದು ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ. ಸಾಮಾಜೀಕ ಜಾಲತಾಣದಲ್ಲಿ ಈ ಕುರಿತು ಹಲವಾರು ವಿಡ್ಹೀಯೋಗಳು ವೈರಲ್ ಕೂಡಗೊಂಡಿವೆ. ಅಲ್ಲದೇ, ಜನರು ಕೂಡ ಹಲವಾರು ಬಾರಿ ಸಂಬಂಧಿಸಿದ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕೂಡ ಯಾವುದೇ, ಪ್ರಯೋಜನವಾಗಿಲ್ಲ.
ರಾತ್ರಿಯ ವೇಳೆಯಂತೂ ಇಲ್ಲಿನ ಪರಿಸ್ಥಿತಿ ಹೇಳತಿರದಾಗಿದೆ. ಅನೇಕ ವಾಹನಗಳು ಸಿಕ್ಕಿ ಹಾಕಿಕೊಳ್ಳುತ್ತಿವೆ. ಹಲವರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಇಂದು ಖಾನಾಪೂರ ಯುವಾ ಬಿಜೆಪಿಯ ಅಧ್ಯಕ್ಷರಾದ ಪಂಡಿತ್ ಓಗಲೆ ಅವರ ನೇತೃತ್ವದಲ್ಲಿ ಶ್ರಮದಾನ ಮಾಡಿ, ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಕಾರ್ಯವನ್ನು ನಡೆಸಲಾಯಿತು. ಈ ಕುರಿತು ಪಂಡಿತ್ ಓಗಲೆ ಅವರು ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೇದಾರ್ ಸಾಳುಂಕೆ,ಸಂಜು ಮಯೇಕರ, ಪಂಕಜ್ ಕುಟ್ರೆ, ವಿನಾಯಕ್ ಸುತಾರ್ ಸೇರಿದಂತೆ ಇನ್ನುಳಿದವರು ಶ್ರಮವಹಿಸಿದರು.