ಖಾನಾಪೂರ ತಾಲೂಕಿನ ಹಲಸಿ – ಬೀಡಿ ಮಾರ್ಗದ ನೂತನ ಬಸ್ ಸೇವೆಗೆ ಇಂದು ಚಾಲನೆಯನ್ನು ನೀಡಲಾಯಿತು.
ಖಾನಾಪೂರ ತಾಲೂಕಿನ ಹಲಸಿ – ಬೀಡಿ ಮಾರ್ಗದ ನೂತನ ಬಸ್ ಸೇವೆಗೆ ಇಂದು ಗ್ರಾಮ ಪಂಚಾಯತ ಅಧ್ಯಕ್ಷ ಪಾಂಡುರಂಗ ಬಾವಕರ ಅವರು ಚಾಲನೆಯನ್ನು ನೀಡಲಾಯಿತು. ಪ್ರತಿದಿನ ಬೆಳಿಗ್ಗೆ 9.15ಕ್ಕೆ ಬೀಡಿಯಿಂದ ಹಲಸಿ, ನೆರಸೇವಾಡಿ, ನಂಜಲಕೊಂಡಲ, ಸಾಗರೆ, ವಡ್ಡೆಬೈಲ್ ಮಾರ್ಗವಾಗಿ ಈ ಬಸ್ ಸಂಚರಿಸಲಿದೆ. ಕಳೆದ 70 ವರ್ಷಗಳಲ್ಲಿ ಈ ಭಾಗದ ಜನರು ಬಸ್ ಸೇವೆಯಿಂದ ವಂಚಿತರಾಗಿದ್ದರು. ಆದರೀಗ, ಅಂಜುಮನ್ ಎ ಇಸ್ಲಾಂನ ಅಧ್ಯಕ್ಷ ಇರ್ಫಾನ್ ತಾಳಿಕೋಟಿ ಅವರ ವಿಶೇಷ ಪ್ರಯತ್ನದಿಂದ ಈ ಬಸ್ ಸೇವೆಯೂ ಅರಂಭಗೊಂಡಿದೆ.
ಗ್ರಾಮಸ್ಥರು ಪಟ್ಟಣ ಪಂಚಾಯಿತಿ ಸದಸ್ಯ ಇರ್ಫಾನ್ ತಾಳಿಕೋಟಿ ಸೇರಿದಂತೆ ಬಸ್ ಚಾಲಕ ನಿರ್ವಾಹಕನನ್ನು ಸತ್ಕರಿಸಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.