ಉದ್ಯಮಿ ಪ್ರಸನ್ನ ವಾಸುದೇವ ಘೋಟಗೆ ಅವರ 61ನೇ ಜನ್ಮ ದಿನದ ನಿಮಿತ್ಯ ಖಾನಾಪೂರ ತಾಲೂಕಿನ ಮರಾಠಿ ಶಾಲೆ ಮತ್ತು ಪ್ರೌಢ ಶಾಲೆಯಲ್ಲಿ ಶೈಕ್ಷಣಿಕ ವಸ್ತುಗಳನ್ನು ವಿತರಿಸಲಾಯಿತು.
ಲೋಂಡಾ ಎಜ್ಯುಕೇಷನ್ ಸಂಸ್ಥೆಯ ಕಾರ್ಯದರ್ಶಿ ಸಂತೋಶ ಭೂತಕಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ದಯಾನಂದ ನಾಯಿಕ ಉದ್ಘಾಟಿಸಿದರು. ನಂತರ ಶಾಲಾ ಮಕ್ಕಳಿಗೆ ಶೈಕ್ಷಣಿಕ ವಸ್ತುಗಳನ್ನು ವಿತರಿಸಲಾಯಿತು.
ಇದೇ ವೇಳೆ ಮುಖ್ಯೋಪಾಧ್ಯಾಯರಾದ ಎನ್.ಡಿ. ಪಾಟೀಲ್ ಮತ್ತು ಸಂತೋಷ ಭೂತಕಿ ಅವರು ಪ್ರಸನ್ನ ಘೋಟಗೆ ಅವರಿಗೆ ಜನ್ಮದಿನದ ಶುಭಾಷಯಗಳನ್ನು ತಿಳಿಸಿದರು.
ಶೈಕ್ಷಣಿಕ, ಸಾಮಾಜೀಕ ಕಾರ್ಯಕ್ರಮಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.