ಈ ದೇಶದ ಎಳಿಗೆಯಲ್ಲಿ ತನ್ನ ತ್ಯಾಗ ಬಲಿದಾನ ಮಾಡಿರುವ ರೈತರನ್ನು ಸರ್ಕಾರಗಳು ಮರೆತಿರುವುದು ನಾಚಿಗೇಡಿನ ಸಂಗತಿ ಎಂದು ರೈತ ಮುಖಂಡ ಪ್ರಕಾಶ ನಾಯಕ ಹೇಳಿದರು
ಬೆಳಗಾವಿಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಷ್ಟ್ರೀಯ ರೈತ ಸಂಘದವರು ಹಮ್ಮಿಕೊಂಡಿದ್ದ ರೈತ ಹುತಾತ್ಮ ದಿನಾಚರಣೆಯಲ್ಲಿ ಹುತಾತ್ಮರಾದ ರೈತರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಹುತಾತ್ಮ ರೈತರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಶೃದ್ಧಾಜಂಲಿ ಸಲ್ಲಿಸಲಾಯಿತು
ರೈತ ಮುಖಂಡ ಪ್ರಕಾಶ ನಾಯಕ ಮಾತನಾಡಿ, ಜಗತ್ತಿಗೆ ಅನ್ನ ನೀಡುವ ಅನ್ನದಾತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಆಚರಣೆ ಮಾಡಬೇಕಿತ್ತು, ಈ ದೇಶದ ಎಳಿಗೆಗೆ ತ್ಯಾಗ ಬಲಿದಾನ ಮಾಡಿರುವ ರೈತರನ್ನು ಸರ್ಕಾರ ಮರೆತಿರುವುದು ನಾಚಿಗೇಡಿನ ಸಂಗತಿ ರೈತರ ಪ್ರಾಣತ್ಯಾಗ ನೆನೆದು ನ್ಯಾಯ ನೀಡಬೇಕಾಗಿದೆ ಎಂದರು
ಮತ್ತೋರ್ವ ನಿಪ್ಪಾಣಿಯ ರೈತ ಹೋರಾಟಗಾರ ಮಾತನಾಡಿ ಸರ್ಕಾರದ ದುಷ್ಟ ಪದ್ದತಿ ಎಂದರೆ ನಿಪ್ಪಾಣಿಯಲ್ಲಿ ನಡೆದ ತಂಬಾಕು ಬೆಳಗಾರರ ಹೋರಾಟದ ಸಮಯದಲ್ಲಿ ರೈತರ ಮೇಲೆ ಗೋಲಿಬಾರ ನಡೆಸಿ 17 ಜನರನ್ನು ಕೊಲ್ಲಲಾಚರಣೆ ಸರ್ಕಾರ ಜಿಲ್ಲಾಡಳಿತ ಬೇರೆ ಬೇರೆ ದಿನಾಚರಣೆ ಆಚರಿಸುತ್ತಾರೆ ಆದರೆ ರೈತ ಹುತಾತ್ಮ ದಿನಾಚರಣೆಯನ್ನು ಸರ್ಕಾರ ಮರೆತು ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.