ವಿಜಯಪುರದ ಕನ್ನಡ ಸಾಹಿತ್ಯ ಪರಿಷತ್ ಕಚೇರಿ ಆವರಣದಲ್ಲಿ ನಡೆದಾಡುವ ದೇವರು ಎರಡನೇಯ ಸ್ವಾಮಿ ವಿವೇಕಾನಂದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಅಪಮಾನ ಮಾಡಲಾಗಿದೆ.
ಕಳೆದ ಮಾರ್ಚ್ ನಲ್ಲಿ ನಡೆದ ವಿಜಯಪುರ ಜಿಲ್ಲೆಯ ತಿಕೋಟಾದ ಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮದ ಹಲವು ಕಡೆಗಳಲ್ಲಿ ಸಿದ್ದೇಶ್ವರ ಶ್ರೀಗಳ ಭಾವಚಿತ್ರ ಇರುವ ಬ್ಯಾನರ್ ಗಳನ್ನು ಹಾಕಲಾಗಿತ್ತು. ಸಾಹಿತ್ಯ ಸಮ್ಮೇಳನ ಮುಗಿದು ಮೂರು ತಿಂಗಳಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಿದ್ದೇಶ್ವರ ಶ್ರೀಗಳಿರುವ ಭಾವಚಿತ್ರದ ಬ್ಯಾನರ್ ಗಳು ಬಿದ್ದಿವೆ. ಮಳೆ ಗಾಳಿಗೆ ಶ್ರೀಗಳ ಭಾವಚಿತ್ರ ಹರಿದು ಹೋಗಿದ್ದು ಇನ್ನುಳಿದ ಭಾವಚಿತ್ರದ ತುಂಬಾ ಮಣ್ಣಾಗಿದೆ. ಇದು ಸಿದ್ದೇಶ್ವರ ಶ್ರೀಗಳ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಸಾಹಿತ್ಯ ಸಮ್ಮೇಳದಲ್ಲಿ ಪರಮ ಪೂಜ್ಯ ಸಿದ್ದೇಶ್ವರ ಶ್ರೀಗಳ ಭಾವಚಿತ್ರವನ್ನು ಬಳಸಿಕೊಂಡು ಕಾರ್ಯಕ್ರಮ ಮುಗಿದ ನಂತರ ಈ ರೀತಿ ಎಸೆಯುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀಗಳಿಗೆ ಗೌರವ ಕೊಡಲು ಸಾಧ್ಯವಾಗದಿದ್ದರೆ ಅವರ ಭಾವಚಿತ್ರ ಯಾಕೆ ಬಳಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.