ಹಣ ವಾಪಸ್ ಕೊಡದೆ ಇರೋದಕ್ಕೆ ಸರಪಳಿಯಿಂದ ಕಟ್ಟಿ ಹಾಕಿದ ಅಮಾನವೀಯ ಘಟನೆ ವಿಜಯಪುರದಲ್ಲಿ ನಡೆದಿದೆ. ಮಾಲೀಲ ಸಾಲದ ಹಣಕ್ಕಾಗಿ ವ್ಯಕ್ತಿಯನ್ನ ಸರಪಳಿಯಿಂದ ಕಟ್ಟಿ ಹಾಕಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ನಡೆದಿದೆ. ಕುಮಾರ್ ಗೌಡ ಕಾಲಿಗೆ ಸರಪಳಿ ಹಾಕಿ ಬಂಧಿಸಿದ್ದಾನೆ.
ಚಾಂದಸಾಬ್ ಮುಲ್ಲಾ ಎನ್ನುವ ವ್ಯಕ್ತಿ ಕಾಲಿಗೆ ಸರಪಳಿ ಬಿಗಿದು ಅಮಾನವೀಯ ಕೃತ್ಯ ಎಸಗಿದ್ದಾನೆ. ಚಾಂದಸಾಬ 20ಸಾವಿರ ಸಾಲ ಪಡೆದಿದ್ದ, ಹಣ ವಾಪಸ್ ಕೊಡದೆ ಇರೋದಕ್ಕೆ ಸರಪಳಿಯಿಂದ ಕಟ್ಟಿ ಹಾಕಿದ್ದಾನೆ. ಕುಮಾರಗೌಡ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ. ಬಳಿಕ ಕಾಲಿಗೆ ಸರಪಳಿ ಹಾಕಿ, ಬೀಗ ಜಡಿದಿದ್ದ ಸರಪಳಿ ಬಿಚ್ಚಿದ್ದಾನೆ. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.