ಕೈಯಲ್ಲಿ ಪಾಠಿ ಪುಸ್ತಕ ಹಿಡಿದುಕೊಂಡು ಶಾಲೆಯಲ್ಲಿ ಪಾಠಕ್ಕೆ ಹಾಜರಾಗಿ ತಮ್ಮ ಸಹಪಾಠಿಗಳೋಂದಿಗೆ ಬೇರೆತು ಆಟವಾಡಬೇಕಾದ ಚಿಕ್ಕ ವಯಸ್ಸಿನಲ್ಲಿ ತಾಯಂದಿರಾಗುತ್ತಿರುವ ಮುಗ್ದ ಬಾಲಕಿಯರ ಕಥೆಗಳು ರಾಜ್ಯವನ್ನೇ ಬೆಚ್ಚಿಬೀಳಿಸುವಂತಿವೆ ಈ ಕುರಿತು ವರದಿ ಇಲ್ಲಿದೆ ನೋಡಿ
ರಾಜ್ಯದಲ್ಲಿ ಬಾಲ್ಯ ಗರ್ಭಧಾರಣೆಯ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚಳ ಕಾಣುತ್ತಿದ್ದು, ಈ ಹಿನ್ನೆಲೆ ಆರೋಗ್ಯ ಇಲಾಖೆ ಬಹಿರಂಗಪಡಿಸಿರುವ ಅಂಕಿ-ಅಂಶಗಳು ಸರ್ಕಾರ ಮತ್ತು ಸಮಾಜವನ್ನು ಆತಂಕಕ್ಕಿಡಾಗಿಸಿವೆ. ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, 2024ರ ಏಪ್ರಿಲ್ ರಿಂದ 2025ರ ಫೆಬ್ರವರಿವರೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 889 ಬಾಲ ಗರ್ಭಿಣಿಯರ ಪ್ರಕರಣಗಳು ದಾಖಲಾಗಿವೆ. 19ನೇ ವಯೋಮಾನದೊಳಗಿನ ಒಟ್ಟು 1092 ಗರ್ಭಧಾರಣೆಯ ಪ್ರಕರಣಗಳು ಪತ್ತೆಯಾಗಿವೆ. ಈ ಅಂಕಿ-ಸಂಖ್ಯೆಗಳು ಕೇವಲ ಇಂದಿನದಲ್ಲ. ಇವು ಹಿಂದಿನ ವರ್ಷಗಳಿಗಿಂತ ಹೆಚ್ಚಾಗಿವೆ ಎಂಬುದೇ ಆತಂಕದ ಸಂಗತಿ. ಹೆಚ್ಚುತ್ತಿರುವ ಬಾಲ್ಯ ಗರ್ಭಧಾರಣೆಗೆ ಪ್ರಮುಖ ಕಾರಣವೆಂದರೆ ಬಾಲ್ಯ ವಿವಾಹ. ಕಳೆದ ವರ್ಷ ಜಿಲ್ಲೆಯಲ್ಲಿ 20 ಬಾಲ್ಯ ವಿವಾಹ ಪ್ರಕರಣಗಳು ಪತ್ತೆಯಾಗಿದ್ದು, ಸಂಬಂಧಪಟ್ಟ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿದೆ. ಈ ವರ್ಷವೂ ಈಗಾಗಲೇ 2 ಪ್ರಕರಣಗಳ ಮೇಲೆ ಎಫ್ಐಆರ್ ದಾಖಲಾಗಿದೆ. ಬೈಟ್
ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಅನಕ್ಷರಸ್ಥತೆ, ಬಡತನ, ಲಿಂಗ ಭೇದಭಾವ, ಮೂಢನಂಬಿಕೆ, ಕೋವಿಡ್ ತುರ್ತು ಪರಿಸ್ಥಿತಿ ಇಂತಹ ವಿವಿಧ ಸಾಮಾಜಿಕ ಸಮಸ್ಯೆಗಳು ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿಯರ ಪ್ರಮಾಣ ಹೆಚ್ಚಾಗಲು ಕಾರಣವಾಗಿವೆ. ಈ ವಿಚಾರವನ್ನು ಗಂಭೀರತವಾಗಿ ಪರಿಗಣಿಸಿರುವ ನೀಡಿರುವ ಜಿಲ್ಲಾಡಳಿತ ಬಾಗಲಕೋಟೆನಲ್ಲಿ ವಿವಿಧ ಇಲಾಖೆಗಳ ಸಭೆ ನಡೆಸಿ, ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡು, ಗ್ರಾಮ ಮಟ್ಟದಿಂದಲೇ ಜಾಗೃತಿ ಮತ್ತು ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ. ಬೈಟ್
ಅಧಿಕಾರಿಗಳ ಅಭಿಪ್ರಾಯದಂತೆ, ಕೇವಲ ಕಾನೂನು ತಿದ್ದಿಸುವುದರಿಂದ ಮಾತ್ರ ಸಾಲದು. ಇದಕ್ಕೆ ವಿರುದ್ಧವಾಗಿ ಸಮುದಾಯದ ಮನೋಭಾವನೆ ಬದಲಾವಣೆ, ಶಿಕ್ಷಣ ಹಾಗೂ ಜಾಗೃತಿ ಮೂಡಿಸುವ ಕಾರ್ಯವೂ ಅವಶ್ಯಕವಾಗಿದೆ.