Uncategorized

ಪ್ರಯಾಣಿಕರಿಗೆ ನಾಗರೀಕ ಸೌಲಭ್ಯಗಳನ್ನು ಹೆಚ್ಚಿಸಿ

Share

ಅಂಕಲಗಿ – ಪ್ರಯಾಣಿಕರಿಗೆ ಮೂಲ ಭೂತ ಸೌಲಭ್ಯಗಳನ್ನು ಮತ್ತಷ್ಟು ಹೆಚ್ಚಿಸಿ ಎಂದು ರೈಲ್ವೆ ಸಲಹಾ ಸಮಿತಿ ಸದಸ್ಯ , ಬಿಜೆಪಿ ಮಂಡಳ ಅದ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಹೇಳಿದರು. ಅವರು ಗುರುವಾರ ಸಮೀಪದ ಸುಳಧಾಳ ರೈಲ್ವೆ ನಿಲ್ದಾಣದ ಮುಖ್ಯ ಕಚೇರಿಯಲ್ಲಿ ಜರುಗಿದ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಯಾಣಿಕರಿಗೆ ಬೋರ ವೆಲ್ ನೀರು ಬದಲಾಗಿ ಸುಳಧಾಳ ಗ್ರಾಮಕ್ಕಿರುವ ಹಿಡಕಲ್ ನೀರು ಸರಬರಾಜು ಮಾಡಲು ಸೂಕ್ತ ಕ್ರಮ ಜರುಗಿಸಬೇಕು. ಮುಖ್ಯ ರಸ್ತೆಯಿಂದ ಸ್ಟೇಷನ್ ವರೆಗೆ ಸಂಪರ್ಕಿಸುವ ಕಚ್ಚಾ ರಸ್ತೆ ಅಗಲೀಕರಣಗೊಳಿಸಿ ಡಾಂಬರೀಕರಣ ಮಾಡಬೇಕು. ನಿಲ್ದಾಣದ ಕಂಪೌಂಡಿಗೆ ಗೇಟ್ ಮತ್ತು, ಸಿ ಸಿ ಕ್ಯಾಮರಾ ಅಳವಡಿಸಬೇಕು ಎಂದರಲ್ಲದೆ, ಪ್ಲಾಟ್ ಫಾರ್ಮ ಮೇಲೆ ಶೆಲ್ಟರ್ ನಿರ್ಮಿಸಬೇಕು. ಸ್ಟೇಷನ್ ಅಭಿವ್ರದ್ಧಿಗಾಗಿ ಕೈಗೆತ್ತಿಕೊಳ್ಳುವ ಕಾಮಗಾರಿಗಳು ಕಳಪೆಯಾಗದಂತೆ ಎಚ್ಚರ ವಹಿಸಬೇಕಲ್ಲದೆ, ಸಂಚಾರ ದಟ್ಟನೆ ತಪ್ಪಿಸಲು ಮೇಲ್ಸೇತುವೆ ನಿರ್ಮಿಸಬೇಕು..ಪ್ರಯಾಣಿಕರಿಗೆ ಬೇಸರ ತಪ್ಪಿಸಲು ಸುಸಜ್ಜಿತ ವಿಶ್ರಾಂತಿ ಕೋಣೆ ಯೊಂದಿಗೆ ಪುಟ್ಟ ಗ್ರಂಥಾಲಯ ಬೇಕು , ಈ ಎಲ್ಲ ಸೌಲಭ್ಯ ಕಲ್ಪಿಸಲು ರೈಲ್ವೆ ಇಲಾಖೆಯಿಂದ ಅನುಮತಿ ಪಡೆದು ಕಾರ್ಯ ಪ್ರಾರಂಭಿಸಬೇಕು. ಚೆನ್ನಮ್ಮ ಮತ್ತು ಎಲ್ ಟಿ ಟಿ ಎಕ್ಸ್ ಪ್ರೆಸ್ ಟ್ರೇ ನ್ ಗಳು ಇಲ್ಲಿ ನಿಲುಗಡೆಯಾಗಬೇಕು ಜೊತೆಗೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಟ್ರೇನ್ ಗಳನ್ನು ಕೈಗೆಟುಕುವ ದರದಲ್ಲಿ ಓಡಿಸಬೇಕು ಎಂದರು.

ಉಪಸ್ತಿತರಿದ್ದ ಬೆಳಗಾವಿ ವಿಭಾಗದ ಚೀಪ್ ಕಮರ್ಷಿಯಲ್ ಇನ್ಸ್ ಪೆಕ್ಟರ್ ಭೀಮಪ್ಪಾ ಮೇದಾರ ಉಪಸ್ತಿತರಿದ್ದ ಸಲಹಾ ಸಮಿತಿ ಸದಸ್ಯರನ್ನು ಸ್ವಾಗತಿಸಿ ಮಾತನಾಡಿ ಸಮಿತಿಯ ಬೇಡಿಕೆಗಳನ್ನು ಮೇಲಾಧಿಕಾರಿಗಳಿಗೆ ಕಳುಹಿಸುವದಾಗಿ ಹೇಳಿದರಲ್ಲದೆ , ಬದಲಾದ ರೈಲ್ವೆ ನಿಯಮಗಳನ್ನು ಮತ್ತು ಸೌಲಭ್ಯಗಳ ಕುರಿತು ವಿವರಿಸಿದರು.

ಸಲಹಾ ಸಮಿತಿ ಸದಸ್ಯರಾದ ಭೀಮಗೌಡ್ ಪಾಟೀಲ, ಕಲ್ಲಪ್ಪಾ ವಾಟರಿ, ಗಣಪತಿ ಮರಾಠೆ, ಬಿಜೆಪಿ ಯುವ ಮೊರ್ಚಾ ಉಪಾಧ್ಯಕ್ಷ ಆನಂದ ಅತ್ತುಗೋಳ, ಸ್ಟೇಷನ್ ಮಾಸ್ಟರ್ ಸೋನು ಚೌಧರಿ, ಪಾಯಿಂಟ ಮ್ಯಾನ್ ರುದ್ರಪ್ಪಾ ಪಾಟೀಲ, ಸುಳಧಾಳ ಪಿಡಿಓ ಮಂಜುನಾಥ ಪಾಟೀಲ್ ಸೇರಿ
ಬುಕಿಂಗ್ ಎಜೆಂಟ್ ಜಗದೀಶ್ ಕಮ್ಮಾರ ಉಪಸ್ಥಿತರಿದ್ದರು.

ವರದಿ, ಸುರೇಶ ಉರಬಿನಹಟ್ಟಿ

Tags:

error: Content is protected !!