ಅಕ್ರಮ ಮರಳು ಮಾಫಿಯಾ ಅಡ್ಡೆ ಮೇಲೆ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಶಂಭೇವಾಡ ಗ್ರಾಮದ ಬಳಿ ನಡೆದಿದೆ.
ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು 6 ಟಿಪ್ಪರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅನಧಿಕೃತ ಮರಳು ಸಾಗಾಟದ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಲಾಗಿದೆ. ಆಲಮೇಲ ಠಾಣೆಯ ಪಿಎಸ್‌ಐ ಅರವಿಂದ ಅಂಗಡಿ, ಸಿಪಿಐ ನಾನಾಗೌಡ ಇವರ ನೇತೃತ್ವದಲ್ಲಿ ನಡೆದಿದೆ. ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.