Bagalkot

ಬಾಗಲಕೋಟೆಯಲ್ಲಿ ನಿಲ್ಲದ ಪಡಿತರ ಅಕ್ಕಿ ಅಕ್ರಮ ದಂಧೆ

Share

ಪಡಿತರ ಅಕ್ಕಿಯನ್ನು ಕಾಳ ಸಂತೆಯಲ್ಲಿ ಸೀಜ್ ಆಗಿದ್ದ ವಾಹನದಲ್ಲೇ ಮತ್ತೆ ಸಾಗಾಟ ಮಾಡುತ್ತಿರುವುದರ ಬಗ್ಗೆ ಹೇಳಿಕೆ ಪಡೆಯಲು ಹೊದ ವರಿದಿಗಾರರ ಮೇಲೆ ಆಹಾರ ಇಲಾಖೆಯ ಅಧಿಕಾರಿ ದರ್ಪತೋರಿದ ಘಟನೆ ಜರುಗಿದೆ. ಬಾಗಲಕೋಟೆ ಜಿಲ್ಲಾ ಆಡಳಿತ ಭವನದಲ್ಲಿ ಡಿಸಿ, ಸಿಇಒ ಸ್ಥಾನ ಪಲ್ಲಟವಾದ್ರೂ ಆಹಾರ ಇಲಾಖೆಯ ಡಿಡಿ ಹುದ್ದೆ ಮಾತ್ರ ಅಭಾದಿತವಾಗಿದೆ. ಆಹಾರ ಇಲಾಖೆ ಉಪ ನಿರ್ದೇಶಕ ಶ್ರೀಶೈಲ್ ಕಂಕಣವಾಡಿ ಕಳೆದ ಹತ್ತು ವರ್ಷಗಳಿಂದ ಭದ್ರವಾಗಿ ತಳ ಊರಿದ್ದಾರೆ. ಜಿಲ್ಲೆಯಲ್ಲಿ ಚಾಚಿಕೊಂಡಿರುವ ಅಕ್ರಮ ಪಡಿತರ ಅಕ್ಕಿ ಕರಾಳ ದಂಧೆಕೋರರಿಗೆ ಆಹಾರ ಇಲಾಖೆಯ ಅಧಿಕಾರಿಗಳ ಕೃಪಾ ಕಟಾಕ್ಷವಿರಬಹುದು ಎನ್ನುವ ಆರೋಪಗಳು ಕೇಳಿಬಂದಿವೆ.

ಯಾವ ಚ್ಯಾನಲ್ ನಿಮ್ಮದು ಎಂದು ಕಣ್ಣು ಕೀಸಿದು ಗುರಾಯಿಸಿ ಕೈ ಮಾಡಿ ಸಮಾಧಾನ ಸಮಾಧಾನ ಎಂದು ಅವಾಜ್ ಹಾಕಿದ್ದಾರೆ ವಿಡಿಯೋ ಮಾಡಿ ಕೊಂಡಿದ್ದಾರೆ ಎಂದು ತಿಳಿಯುತ್ತಿದ್ದಂತೆ ಎಚ್ಚೆತ್ತ ಅಧಿಕಾರಿ ವಾಟ್ಸಾಪ್ ಆಡಿಯೋ ಕರೆ ಮಾಹಿತಿ ನೀಡುತ್ತೇನೆ ಈ ಬೈಟ್ ರೆಕಾರ್ಡ್ ಆಗುತ್ತಿದ್ದಂತೆ ವಾರ್ತಾ ಇಲಾಖೆ ಅಧಿಕಾರಿಗಳಿಂದ ಫೋನ್ ಮಾಡಿಸಿ ಮಾಹಿತಿ ನೀಡುತ್ತೇನೆ ಆಹಾರ ಇಲಾಖೆಯ ನಿರ್ದೇಶಕ ಶ್ರೀಶೈಲ್ ಕಂಕಣವಾಡಿ ಹೇಳಿದರು.

Tags:

error: Content is protected !!