Athani

ಅಥಣಿ ಜಿಲ್ಲೆಯಾಗಲಿ ಇಲ್ಲ ವಿಜಯಪೂರಕ್ಕೆ ಸೇರಿಸಿ: ಮಹೇಶ ಕುಮಠಳ್ಳಿ

Share

ಬೆಳಗಾವಿ ಜಿಲ್ಲೆ ವಿಭಜನೆಯಾದರೆ ಅಥಣಿ ಪಟ್ಟಣವನ್ನು ನೂತನ ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ನಾವು ಪ್ರಸ್ತಾವಣೆ ಸಲ್ಲಿಸುತ್ತಿದ್ದೇವೆ ಎಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
ಸೋಮವಾರ ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಥಣಿ ಬಹಳಷ್ಟು ಅಭಿವೃದ್ಧಿಯಾಗಿದೆ. ತಾಲೂಕಿನ ಕೊಟ್ಟಲಗಿ ಗ್ರಾಮ ಜಿಲ್ಲೆಯಿಂದ ಸುಮಾರು 190 ಕಿ.ಮಿ ದೂರದಲ್ಲಿದೆ. ನನ್ನ ಮತಕ್ಷೇತ್ರ ಮಹಾರಾಷ್ಟ್ರ ಮತ್ತು ವಿಜಯಪೂರ ಗಡಿಗೆ ಹತ್ತಿಕೊಂಡಿದೆ ನಾವು ಆಡಳಿತಾತ್ಮಕವಾಗಿ ಬೆಳಗಾವಿಯೊಂದಿಗೆ ಇದ್ದೇವೆ. ಆರ್ಥಿಕ, ಆರೋಗ್ಯ ಇನ್ನಿತರ ವ್ಯವಹಾರಗಳು ಮಹಾರಾಷ್ಟ್ರದೊಂದಿಗಿದೆ ಜಿಲ್ಲಾ ಕೇಂದ್ರಕ್ಕೆ ಯಾವುದೋ ಸರ್ಕಾರಿ ಕೆಲಸಕ್ಕಾಗಿ ಬರಲು ಜನಸಾಮಾನ್ಯರಿಗೆ ಸಾಧ್ಯವಾಗುತ್ತಿಲ್ಲ. ಯಾವುದೇ ಸಂದರ್ಭದಲ್ಲಿ ಅಥಣಿ ಜಿಲ್ಲೆಯಾಗಬೇಕು ಅಥಣಿ ಜಿಲ್ಲೆಯನ್ನಾಗಿ ರಚನೆ ಮಾಡಲು ಅಡಚಣೆ ಬಂದರೆ ನಾವು ವಿಜಯಪೂರಕ್ಕೆ ಸೇರಿಕೊಳ್ಳುತ್ತೇವೆ ವಿನಃ ಬೆಳಗಾವಿಯೊಂದಿಗೆ ಒಲ್ಲ ಎನ್ನುವ ಪರಿಸ್ಥೀತಿ ಅಥಣಿ ಜನರದ್ದಾಗಿದೆ ಎಂದರು

Tags:

error: Content is protected !!