ಧಾರವಾಡ- ನಿರಂತರ ಮಳೆಯಿಂದಾಗಿ ಧಾರವಾಡ ವಾರ್ಡ್‌ನಂ -5 ಮದಿಹಾಳ ನಗರದ ಮುಖ್ಯ ರಸ್ತೆ ಅವ್ಯವಸ್ಥೆಯ ಆಗರವಾಗಿದ್ದು, ಕೂಡಲೇ ರಸ್ತೆ ದುರಸ್ಥಿ ಮಾಡಿ ಸ್ಥಳೀಯ ನಿವಾಸಿಗಳಿಗೆ ಸುಗಮಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಧಾರವಾಡ ಮಾಹಾನಗರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಗೌರಮ್ಮಬಲೋಗಿ ಮನವಿ ಸಲ್ಲಿಸಿದ್ದರು.
ಮದಿಹಾಳದ ಮುಖ್ಯ ರಸ್ತೆ ಸರಿ ಪಡಿಸುವಂತೆ ಧಾರವಾಡ ಮಹಾನಗರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಗೌರಮ್ಮಾ ಬಲೋಗಿ ಅವರು, ಹು-ಧಾ ಮಹಾನಗರ ಪಾಲಿಕೆ ಕಮೀಷನರ್ ಡಾ. ರುದ್ರೇಶ್ ಘಾಳಿ ಅವರಿಗೆ ಮನವಿಯನ್ನು ಮಾಡಿಕೊಂಡರು.
ಬಳಿಕ ಕಮೀಷನರ್ ಅವರು ಮನವಿಯನ್ನು ಸ್ವೀಕರಿಸಿ ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವದಾಗಿ ಭರವಸೆ ನೀಡಿದ್ದಾರಂತೆ. ಈ ಸಂದರ್ಭದಲ್ಲಿ ಮಾಡೇವಿ ಬ್ಯಾಳಿ, ನೀಲಮ್ಮ ಹುಂಬಿ ಸೇರಿ ಹಲವರು ಉಪಸ್ಥಿತರಿದ್ದರು.