ಬೆಳಗಾವಿ ಕೆ.ಎಲ್.ಎಸ್ ಗೋಗಟೆ ಸಿವ್ಹಿಲ್ ಇಂಜಿನೀಯರಿಂಗ್ ವಿಭಾಗವು ಬೆಳಗಾವಿಯ ಬಡೆಕೊಳ್ಳಮಠ ಹತ್ತಿರದ ಹೆದ್ದಾರಿ ಇತ್ತೀಚೆಗೆ ಅಪಘಾತ ಪ್ರವಣ ಕ್ಷೇತ್ರವಾಗಿ ಪರಿಣಮಿಸಿದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕೆಲ ಸಲಹೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಿದೆ.
ಇದರ ವಿವರ ಹೀಗಿದೆ,
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿಯ ಬಡೇಕೊಳ್ಳಮಠ ಕ್ರಾಸ್ ಬಳಿ ಇರುವ ವೃತ್ತಾಕಾರದ ವಕ್ರದ ಜ್ಯಾಮಿತೀಯ ಸ್ಥಿತಿಗತಿಗಳನ್ನು ಪರಿಶೀಲಿಸುವ ಉದ್ದೇಶದಿಂದ ಗೋಗಟೆ ಕಾಲೇಜಿನ ಇಂಜೀನಿಯರಿಂಗ್ ವಿದ್ಯಾರ್ಥಿಗಳು ಪರಿಶೀಲನೆ ನಡೆಸಿದ್ದಾರೆ.
IRC:38–1988 (ಕೋಷ್ಟಕ ಸಂಖ್ಯೆ 03) ಪ್ರಕಾರ 80 ಕಿಮೀ ವೇಗಕ್ಕೆ ಕನಿಷ್ಠ ತಿರುವು 230 ಮೀಟರ್ ಆಗಿರಬೇಕು. ಆದರೇ ಇಲ್ಲಿ 220 ಮೀಟರ್ ವಕ್ರವಾಗಿದೆ.
ಕೋಷ್ಟಕ 1: ಬಡೇ ಕೊಳ್ಳಮಠ ವಕ್ರದ ಜ್ಯಾಮಿತೀಯ ಮೌಲ್ಯಗಳ ವಿವರಣೆ (Table.1)
ವಕ್ರದ ಆವರ್ತನಕ್ಕೆ 220 ಮೀಟರ್ ನೀಡಲಾಗಿದೆ, ಇದು IRC 38-1988 ಪ್ರಕಾರ 80 ಕಿಮೀ ವೇಗಕ್ಕೆ ಅಗತ್ಯವಿರುವ 230 ಮೀಟರ್’ಗೆ ತೀರಾ ಕಡಿಮೆಯಾಗಿದೆ. ವಕ್ರದ ಸಂಪೂರ್ಣ ಉದ್ದದಲ್ಲಿ carriage way (ಸಾರಿಗೆ ಮಾರ್ಗ) ಅಗಲ ಕಡಿಮೆಯಿದ್ದು, ಅಪಾಯಕಾರಿ ಪರಿಸ್ಥಿತಿಯನ್ನುಂಟುಮಾಡುತ್ತಿದೆ. ಅಂಡರ್’ಪಾಸ್ ಹಿನ್ನೆಲೆ ವಕ್ರದ ಕೊನೆಗೆ ಕಾರಿಡೋರ್ ಅಗಲ ಇನ್ನಷ್ಟು ಕಡಿಮೆಯಾಗಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.
ಇಳಿಜಾರಿನಲ್ಲಿ ವಾಹನಗಳು ಅತಿವೇಗವಾಗಿ ಸಂಚರಿಸುತ್ತಿರುವುದು ಕೂಡ ಅಪಘಾತಗಳಿಗೆ ಕಾರಣವಾಗಿದೆ. ವಾಹನ ಸವಾರರು ಲೇನ್ ಶಿಸ್ತನ್ನು ಅನುಸರಿಸುತ್ತಿಲ್ಲ ಎಂಬುದು ಸ್ಥಳೀಯ ಪರಿಶೀಲನೆಯ ವೇಳೆ ಗಮನಕ್ಕೆ ಬಂದಿದೆ.
ಅಪಘಾತಗಳನ್ನು ನಿಯಂತ್ರಿಸಲು Underpass ಬಳಿ concrete crash barriers ಹಾಗೂ guard railsಗಳನ್ನು ಇತ್ತೀಚೆಗಷ್ಟೇ ಅಳವಡಿಸಲಾಗಿದೆ. ಇಳಿಜಾರಿನಲ್ಲಿ ವೇಗ ನಿಯಂತ್ರಣಕ್ಕಾಗಿ rumble stripsಗಳನ್ನು ವಕ್ರದ ಉದ್ದದಲ್ಲಿ ಅಳವಡಿಸಲಾಗಿದೆ. ಇಳಿಜಾರಿನ ಆರಂಭದಲ್ಲಿ Barricade ಒದಗಿಸಲಾಗಿದ್ದು, ಇವು ವೇಗವಾಗಿ ಬರುವ ವಾಹನಗಳಿಗೆ ಅಡ್ಡಿಯಾಗುತ್ತಿವೆ. ಇಡೀ ಇಳಿಜಾರಿನಲ್ಲಿ ಕೇವಲ ಎರಡು ಕಡೆಗಳಲ್ಲಿ ಮಾತ್ರ flashing lights ಅಳವಡಿಸಲಾಗಿದೆ.
ಇಡೀ ಇಳಿಜಾರಿನಲ್ಲಿ ವೇಗವನ್ನು ಗರಿಷ್ಠ 65 ಕಿಮೀಗೆ ಸೀಮಿತಗೊಳಿಸಬೇಕು ಹಾಗೂ MoRT&H ಮಾದರಿಯ ಸೂಚನಾ ಫಲಕಗಳನ್ನು ಅಳವಡಿಸಬೇಕು. ವಕ್ರದ ಉದ್ದದ ಮೂಲಕವಾಗಿ 10-15 ಮೀಟರ್ ಅಂತರದಲ್ಲಿ ಹೆಚ್ಚಿನ flashing lights ಅಳವಡಿಸಲು ಶಿಫಾರಸ್ಸು ಮಾಡಲಾಗಿದೆ.
ಈಗಿರುವ guard rails ಅನ್ನು ನವೀಕರಿಸಿದ ಮಾದರಿಯ Guard Rail (ಚಿತ್ರ 3) ನೊಂದಿಗೆ ಬದಲಾಯಿಸಬೇಕು.
ಲೇನ್ ಶಿಸ್ತು ಕಡ್ಡಾಯವಾಗಿ ಜಾರಿಗೆ ತರಬೇಕು ಹಾಗೂ ಸೂಕ್ತವಾದ ರಸ್ತೆ ಗುರುತುಗಳನ್ನು (road markings) ಅಳವಡಿಸಬೇಕು.
ನಿಯಮ ಉಲ್ಲಂಘನೆ ಮಾಡುವವರನ್ನು ಗುರುತಿಸಲು ಸ್ಮಾರ್ಟ್ ಕ್ಯಾಮೇರಾಗಳನ್ನು ಅಳವಡಿಸಬೇಕೆಂದು ಸಲಹೆ ನೀಡಿ ಶಿಫಾರಸ್ಸನ್ನು ಸಲ್ಲಿಸಲಾಗಿದೆ.